Sunday, 11th May 2025

ಇಂದಿನಿಂದ ಬಾಡಿಗೆ ಮನೆ ಮೇಲೆ ಜಿಎಸ್‌ಟಿ ಕಟ್ಟಬೇಕಿಲ್ಲ

ವದೆಹಲಿ: ಮನೆ ಬಾಡಿಗೆ ಮೇಲೆ ಶೇ.18 ಸರಕು ಮತ್ತು ಸೇವಾ ತೆರಿಗೆ(GST) ವಿಧಿಸುತ್ತಿದ್ದ ನಿಯಮವನ್ನು ಇಂದಿನಿಂದ ಕೈಬಿಡಲಾಗಿದೆ.

ಬಾಡಿಗೆದಾರನಿಗೆ ಕೇವಲ ವಸತಿ ಉದ್ದೇಶಕ್ಕೆ ಮನೆ ನೀಡಿದ್ದರೆ ಅದಕ್ಕೆ ಮನೆ ಮಾಲೀಕ ಜಿಎಸ್‌ಟಿ ಕಟ್ಟಬೇಕಿಲ್ಲ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ಹೇಳಿದೆ. ಆದರೆ ಬಾಡಿಗೆ ತೆಗೆದುಕೊಂಡು ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಶೇ.18ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ಡಿಸೆಂಬರ್‌ 17 ರಂದು ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆಯ ಶಿಫಾರಾಸುಗಳು ಜ.1 ರಿಂದ ಜಾರಿಗೆ ಬರುತ್ತಿದೆ. ರಿಫೈನರಿಗಳಲ್ಲಿ ಬಳಸ ಲಾಗುವ ಈಥೈಲ್ ಮದ್ಯ(Eethyl Alcohol) ಮೇಲೆ ಇಂದಿನಿಂದ ಶೇ.5 ಜಿಎಸ್‌ಟಿ ವಿಧಿಸಲಾಗುತ್ತಿದೆ.

ಇದಕ್ಕೂ ಮೊದಲು ಶೇ.18 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ದ್ವಿದಳ ಧಾನ್ಯಗಳ ಮೇಲಿದ್ದ ಶೇ.5 ತೆರಿಗೆಯನ್ನು ಶೂನ್ಯಕ್ಕೆ ಇಳಿಸಲಾಗಿದೆ.

 
Read E-Paper click here