Sunday, 11th May 2025

ಧಾರ್ಮಿಕ ಸ್ವಾತಂತ್ರ್ಯ ಮಸೂದೆಗೆ ಮಧ್ಯಪ್ರದೇಶ ಸರ್ಕಾರ ಅನುಮೋದನೆ

ಭೂಪಾಲ್: ಮಧ್ಯಪ್ರದೇಶ ಸರ್ಕಾರದ ಧಾರ್ಮಿಕ ಸ್ವಾತಂತ್ರ್ಯ ಮಸೂದೆ(2020)ಗೆ ಶನಿವಾರ ಸಚಿವ ಸಂಪುಟ ಸಭೆ ಅನು ಮೋದನೆ ನೀಡಿದೆ.

ಕಾಯ್ದೆ ಜಾರಿಯಾದರೆ ವಿವಾಹದ ಮೂಲಕ ಅಥವಾ ಇನ್ನಾವುದೇ ಮೋಸದ ಮೂಲಕ ಮತಾಂತರಗೊಂಡಿದ್ದಕ್ಕಾಗಿ 1 ಲಕ್ಷ ರೂ.ಗಳ ದಂಡ ಮತ್ತು 10 ವರ್ಷ ಜೈಲು ಶಿಕ್ಷೆ ವಿಧಿಸುತ್ತದೆ ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.

ಬಲವಂತದ ಧಾರ್ಮಿಕ ಮತಾಂತರ ವಿರುದ್ಧ ಮಧ್ಯಪ್ರದೇಶ ಸರ್ಕಾರ ತಂದಿರುವ ಕಾಯ್ದೆ ದೇಶದಲ್ಲೇ ಅತ್ಯಂತ ಪ್ರಬಲವಾಗಿದೆ ಎಂದು ತಿಳಿಸಿದೆ.

ಸಚಿವ ಸಂಪುಟ ಅನುಮೋದನೆ ದೊರೆತಿದ್ದು, ವಿಧಾನಸಭೆಯಲ್ಲಿ ಕಾಯಿದೆ ಮಂಡಿಸಲಾಗುವುದು. ಈ ಮಸೂದೆಯು 1968 ರ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯನ್ನು ಬದಲಾಯಿಸುತ್ತದೆ (ರಾಜ್ಯ ವಿಧಾನಸಭೆಯ ಅನುಮೋದನೆಯ ನಂತರ) ಎಂದು ಅವರು ಹೇಳಿದರು.

ವ್ಯಕ್ತಿಯನ್ನು ಮತಾಂತರಗೊಳಿಸುವ ಉದ್ದೇಶದಿಂದ ನಡೆದ ಯಾವುದೇ ವಿವಾಹವನ್ನು ಈ ಉದ್ದೇಶಿತ ಕಾಯಿದೆಯ ನಿಬಂಧನೆ ಗಳ ಅಡಿಯಲ್ಲಿ ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.

ಮತಾಂತರಗೊಳ್ಳಲು ಇಚ್ಚಿಸುವವರು ಎರಡು ತಿಂಗಳ ಮೊದಲು ಜಿಲ್ಲಾಡಳಿತದ ಮುಂದೆ ಅರ್ಜಿ ಸಲ್ಲಿಸುವ ಅವಶ್ಯಕತೆಯಿದೆ ಎಂದು ಮಿಶ್ರಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *