Sunday, 11th May 2025

ನಾಳೆಯಿಂದ ಮೂರು ದಿನ ಉತ್ತರ ಭಾರತದಲ್ಲಿ ರೆಡ್ ಅಲರ್ಟ್‌

Red Alert

ನವದೆಹಲಿ: ಮುಂದಿನ 24 ಗಂಟೆಗಳಲ್ಲಿ ನೈಋತ್ಯ ಮಾನ್ಸೂನ್ ಬಿಹಾರ, ಉತ್ತರ ಪ್ರದೇಶದ ಕೆಲವು ಭಾಗಗಳು ಮತ್ತು ಉತ್ತರಾ ಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಿಗೆ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನೈಋತ್ಯ ಮಾನ್ಸೂನ್ ಮುಂದಿನ 48 ಗಂಟೆಗಳಲ್ಲಿ (ಜೂನ್ 30 ಮತ್ತು ಜುಲೈ 1 ರ ನಡುವೆ) ಅರಬ್ಬಿ ಸಮುದ್ರ ಮತ್ತು ಗುಜರಾತ್‌ನ ಉಳಿದ ಭಾಗಗಳು, ರಾಜ ಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ-ಚಂಡೀಗಢ ಮತ್ತು ದೆಹಲಿಯ ಕೆಲವು ಭಾಗಗಳಿಗೆ ಮುಂದುವರಿಯಲಿದೆ.