Tuesday, 13th May 2025

ಕಾರ್ಯಕ್ರಮ ರದ್ದಾಗುವುದಕ್ಕೆ ಭದ್ರತಾ ಲೋಪವಲ್ಲ, ಪಂಜಾಬ್ ಜನರ ನಿರಾಕರಣೆ ಕಾರಣ: ಸುರ್ಜೇವಾಲಾ

#RandeepSurjewala

ಅಮೃತಸರ: ಪ್ರಧಾನಿಯವರ ಪಂಜಾಬ್ ಕಾರ್ಯಕ್ರಮ ರದ್ದಾಗಿರುವುದಕ್ಕೆ ಬಿಜೆಪಿಯ ಹಲವು ನಾಯಕರು ಪಂಜಾಬ್ ನ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಆರೋಪಿಸಿದ್ದಾರೆ. ಈ ಆರೋಪ ಅಲ್ಲಗಳೆದಿರುವ ಕಾಂಗ್ರೆಸ್ ಕಾರ್ಯಕ್ರಮ ರದ್ದಾಗುವುದಕ್ಕೆ ಭದ್ರತಾ ಲೋಪವಲ್ಲ ಬದಲಿಗೆ ಪಂಜಾಬ್ ಜನರ ನಿರಾಕರಣೆ ಕಾರಣ ಎಂದಿದೆ‌.

ಈ ವಿಚಾರಕ್ಕೆ ಸಂಬಂಧಿಸಿ, ಕಾಂಗ್ರೆಸ್ ನ ಹಿರಿಯ ವಕ್ತಾರ ರಂದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರಿಗೆ ಟಾಂಗ್ ಕೊಟ್ಟಿದ್ದಾರೆ.‌

ಪ್ರಧಾನಿಯವರು ರ್ಯಾಲಿಗೆ ಬರದೆ ಹಿಂತಿರುಗಿದ್ದು ಭದ್ರತಾ ಲೋಪದಿಂದಲ್ಲ, ಕಾರ್ಯಕ್ರಮದ ಸ್ಥಳದಲ್ಲಿದ್ದ ಖಾಲಿ ಕುರ್ಚಿಗಳಿಂದ. ವಿಡಿಯೋ ಹಂಚಿ ಕೊಂಡಿರುವ ಸುರ್ಜೇವಾಲಾ, ನಿಮ್ಮ ರೈತವಿರೋಧಿ ನಡವಳಿಕೆಯೇ ಇದಕ್ಕೆ ಕಾರಣ. ನಿಮ್ಮ ತಪ್ಪಿನಿಂದಾಗಿರುವ ಪ್ರಮಾದಕ್ಕೆ ಕಾಂಗ್ರೆಸ್ಸನ್ನ ಆರೋಪಿಸು ವುದನ್ನ ನಿಲ್ಲಿಸಿ. ನಿಮ್ಮ ಅಹಂಕಾರದ ಆಡಳಿತಕ್ಕೆ ಕನ್ನಡಿ ಹಿಡಿದು ಸತ್ಯದರ್ಶನ‌ ಮಾಡಿಸಿದ್ದಾರೆ ಎಂದಿದ್ದಾರೆ.

ಪಂಜಾಬ್ ರೈತರು ಮೋದಿ ಭೇಟಿಯನ್ನ ಮೊದಲಿನಿಂದಲೂ ವಿರೋಧಿಸುತ್ತಿದ್ದಾರೆ. ಈವರೆಗೂ ಸತ್ತಿರುವ 700 ರೈತ ಕುಟುಂಬಕ್ಕೆ ಪರಿಹಾರ ನೀಡಿ ಎಂಬ ಬೇಡಿಕೆ ಅವರದ್ದು ಎಂದಿದ್ದಾರೆ.