Monday, 12th May 2025

ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ನೇಮಕ

ನವದೆಹಲಿ: ಭಾರತದ ನೂತನ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡ ಲಾಗಿದೆ.

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು, ರಾಜೀವ್ ಕುಮಾರ್ ಅವರು 2022 ರ ಮೇ 15ರಿಂದ ಜಾರಿಗೆ ಬರುವಂತೆ ಮುಖ್ಯ ಚುನಾವಣಾ ಆಯುಕ್ತರಾಗಿ ದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

2022ರಲ್ಲಿ ಕಳೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ನಡೆಸಿದ ಸುಶೀಲ್ ಚಂದ್ರ ಅವರ ಸ್ಥಾನವನ್ನು ರಾಜೀವ್ ಕುಮಾರ್ ತುಂಬಲಿದ್ದಾರೆ.

ಕೇಂದ್ರ ಸಚಿವ ಕಿರಣ್ ರಿಜು ಅವರು ಟ್ವಿಟ್ ಮಾಡಿ, ಸಂವಿಧಾನದ ಅನುಚ್ಛೇದ 324 ರ ಖಂಡ (2) ರ ಅನುಸಾರ, ರಾಷ್ಟ್ರಪತಿಗಳು ರಾಜೀವ್ ಕುಮಾರ್ ಅವರನ್ನು 2022 ರ ಮೇ 15 ರಿಂದ ಜಾರಿಗೆ ಬರುವಂತೆ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲು ಸಂತೋಷಪಡುತ್ತಾರೆ. ರಾಜೀವ್ ಕುಮಾರ್ ಅವರಿಗೆ ನನ್ನ ಶುಭ ಹಾರೈಕೆಗಳು ಎಂದಿದ್ದಾರೆ. ರಾಜೀವ್ ಕುಮಾರ್ ಅವರು ಮೇ 15, 2022 ರಿಂದ ಭಾರತದ ಚುನಾವಣಾ ಆಯೋಗಕ್ಕೆ ಸೇರಲಿದ್ದಾರೆ.