Sunday, 11th May 2025

ಮಾದಕವಸ್ತು ಕಳ್ಳಸಾಗಣೆ: ಇಬ್ಬರು ಗುಂಡಿಗೆ ಬಲಿ

ಬಾರ್ಮರ್: ರಾಜಸ್ಥಾನದ ಗಡಿ ಭಾಗದಲ್ಲಿನ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆ ಯಲ್ಲಿ ತೊಡಗಿದ್ದ ಇಬ್ಬರು ಪಾಕಿಸ್ತಾನಿ ವ್ಯಕ್ತಿಗಳು ಗಡಿ ಭದ್ರತಾ ಪಡೆ ಗುಂಡಿಗೆ ಬಲಿಯಾಗಿದ್ದಾರೆ.

ಕಳೆದ ರಾತ್ರಿ ಬಾರ್ಮರ್ ಗಡಿ ಪ್ರದೇಶದ ಸಮೀಪ ಈ ಘಟನೆ ನಡೆದಿದೆ ಎಂದು ಸೇನಾ ವಕ್ತಾರ ಮೂಲಗಳು ತಿಳಿಸಿದೆ.

ಸುಮಾರು ಮೂರು ಕೆ.ಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಗಡಿ ಭಾಗದಲ್ಲಿ ಇಂತಹ ಮಾದಕ ವಸ್ತು ಭಾರತ ದೊಳಗೆ ಕಳುಹಿಸುವ ಕೃತ್ಯಗಳು ನಡೆಯುತ್ತಿರುತ್ತದೆ. ಇದನ್ನು ನಿಯಂತ್ರಿಸಲು ಬಿಎಸ್‍ಫ್ ಗಡಿ ಯುದ್ದಕ್ಕೂ ಹದ್ದಿನ ಕಣ್ಣಿಟ್ಟಿದೆ.

ಭಾರತದ ರಾಜಸ್ಥಾನ ರಾಜ್ಯದಲ್ಲಿ ಪಶ್ಚಿಮ ಪಾಶ್ರ್ವದಲ್ಲಿ ಪಾಕಿಸ್ತಾನದೊಂದಿಗೆ ಸುಮಾರು 1,036-ಕಿಲೋಮೀಟರ್ ಉದ್ದದ ಗಡಿಯನ್ನು ಹಂಚಿಕೊಂಡಿದೆ.