Sunday, 11th May 2025

Raghav Tiwari: ʼಕ್ರೈಂ ಪಟ್ರೋಲ್‌ʼ ಖ್ಯಾತಿಯ ನಟ ರಾಘವ್‌ ತಿವಾರಿ ಮೇಲೆ ಡೆಡ್ಲಿ ಅಟ್ಯಾಕ್‌!

ಮುಂಬೈ: ‘ಕ್ರೈಂ ಪಟ್ರೋಲ್'(Crime Patrol) ಶೋ ಖ್ಯಾತಿಯ ನಟ ರಾಘವ್ ತಿವಾರಿ(Raghav Tiwari) ಅವರು ಇತ್ತೀಚೆಗೆ ಮುಂಬೈನಲ್ಲಿ ರಸ್ತೆ ದಾಟುವಾಗ ಬೈಕ್‌ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಹಲ್ಲೆಗೆ ಒಳಗಾಗಿದ್ದರು. ಈ ಘಟನೆ ಡಿಸೆಂಬರ್ 30 ರಂದು ವರ್ಸೋವಾ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ರಾಘವ್‌ ತಿವಾರಿ ಪ್ರಕಾರ, ಅವರು ತಮ್ಮ ಸ್ನೇಹಿತನ ಕಾರಿನಿಂದ ಇಳಿದು ರಸ್ತೆ ದಾಟುವಾಗ ಆಯಾತಪ್ಪಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾರೆ. ಅವರು ತಕ್ಷಣವೇ ಅವನಲ್ಲಿ ಕ್ಷಮೆಯಾಚಿಸಿದ್ದಾರೆ.ಆದರೆ ಬೈಕ್‌ ಸವಾರ ನಟನನ್ನು ನಿಂದಿಸಿದ್ದಾನೆ. ಬಾಯಿಗೆ ಬಂದ ಹಾಗೆ ಬೈದಿದ್ದಾನೆ. ಯಾಕೆ ನನ್ನ ಮೇಲೆ ದೌರ್ಜನ್ಯವೆಸಗುತ್ತೀಯ ಎಂದು ರಾಘವ್‌ ಕೇಳಿದ್ದು, ಬೈಕ್‌ ಸವಾರ ಕೋಪದಿಂದ ಬೈಕ್‌ನಿಂದ ಕೆಳಗಿಳಿದು ಎರಡು ಬಾರಿ ಚಾಕುವಿನಿಂದ ನಟನಿಗೆ ಇರಿದಿದ್ದಾನೆ. ನಂತರ ಹೊಟ್ಟೆಗೆ ಒದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡ ಕಾರಣ ನಟ ಕುಸಿದು ನೆಲಕ್ಕೆ ಬಿದ್ದಿದ್ದಾರೆ. ಇನ್ನು ಬೈಕ್‌ನಲ್ಲಿದ್ದ ಮದ್ಯ ಬಾಟಲಿ ಕೆಳಗೆ ಬಿದ್ದು ಒಡೆದು ಹೋದ ಕಾರಣ ಅವನು ಮತ್ತಷ್ಟು ಕೋಪಗೊಂಡು ಕಬ್ಬಿಣದ ರಾಡ್‌ನಿಂದ ತಲೆಗೆ ಎರಡು ಬಾರಿ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.

ನಟನಿಗೆ ಕಪಾಳಮೋಕ್ಷವೂ ಮಾಡಿದ್ದು,ರಾಘವ್‌ ತಿವಾರಿ ತಮ್ಮ ಆತ್ಮರಕ್ಷಣೆಗಾಗಿ ಮರದ ತುಂಡನ್ನು ಎತ್ತಿಕೊಂಡು ಬೈಕ್ ಸವಾರನ ಕೈಗೆ ಬಲವಾಗಿ ಹೊಡೆದಿದ್ದಾರೆ ಎಂಬ ಮಾಹಿತಿಯಿದೆ. ಆರೋಪಿ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ. ತಿವಾರಿ ಅವರ ಸ್ನೇಹಿತರು ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಾಕುವಿನಿಂದ ಇರಿದಿರುವ ಆರೋಪಿ ಪ್ರೊಫೆಷನಲ್‌ ದಾಳಿಕೋರ ಎಂದು ತಿವಾರಿ ಹೇಳಿದ್ದಾರೆ.

ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲು ಠಾಣೆಗೆ ಹೋದರೂ ಪೊಲೀಸರು ತಲೆಕೆಡಿಸಿಕೊಂಡಿಲ್ಲ ಎಂದು ನಟ ಹೇಳಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದು, ಆದರೆ ಆರೋಪಿಯನ್ನು ಬಂಧಿಸಿಲ್ಲ ಎನ್ನಲಾಗಿದೆ. ಆರೋಪಿಯನ್ನು ಮೊಹಮ್ಮದ್ ಝೈದ್ ಎಂದು ಗುರುತಿಸಲಾಗಿದೆ. ಆರೋಪಿತ ವ್ಯಕ್ತಿ ನಿರ್ದೇಶಕ ಪರ್ವೇಜ್ ಶೇಖ್ ಅವರ ಮಗ ಎಂದು ತಿಳಿದು ಬಂದಿದೆ.

ರಾಘವ್‌ ತಿವಾರಿ ತಮ್ಮ ನಟನಾ ಪ್ರತಿಭೆಯಿಂದ ಬಾಲಿವುಡ್‌ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ. ಕ್ರೈಂ ಪಟ್ರೋಲ್‌ ಶೋ ಅವರಿಗೆ ಅವರ ಕೆರಿಯರ್‌ನಲ್ಲಿ ಮಹತ್ವದ ತಿರುವನ್ನು ನೀಡಿತ್ತು.

ಈ ಸುದ್ದಿಯನ್ನೂ ಓದಿ:Controversy: ಸಿಪಿಐ(ಎಂ) ಕಾರ್ಯಕ್ರಮಕ್ಕೆ ಬಾಂಗ್ಲಾ ಗಾಯಕಿಗೆ ಆಹ್ವಾನ; ಭುಗಿಲೆದ್ದ ವಿವಾದ

Leave a Reply

Your email address will not be published. Required fields are marked *