Tuesday, 13th May 2025

Pushpa 2 : “ಪುಷ್ಪಾ 2 ವೀಕ್ಷಿಸಲು ಮಗ ಬಯಸಿದ್ದ” ಹೈದರಾಬಾದ್ ಕಾಲ್ತುಳಿತದಲ್ಲಿ ಪತ್ನಿ ಕಳೆದುಕೊಂಡವನ ಗೋಳಾಟ!

Pushpa 2

ಹೈದರಾಬಾದ್‌ : ವಿಶ್ವದಾದ್ಯಂತ ಪುಷ್ಪ 2 (Pushpa 2) ಬಿಡುಗಡೆಯಾಗಿದ್ದು, ತೆರೆ ಮೇಲೆ ಅಬ್ಬರಿಸುತ್ತಿದೆ. ಅಲ್ಲು ಅರ್ಜುನ್‌ ನಟನೆಯ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಸಿನಿಮಾ ಪ್ರದರ್ಶನದ ವೇಳೆ ಹೈದರಾಬಾದ್‌ನಲ್ಲಿ (Hyderabad Stampede) ಅವಘಡವೊಂದು ಸಂಭವಿಸಿದ್ದು , ಕಾಲ್ತುಳಿತಕ್ಕೆ ಮಹಿಳೆಯೊಬ್ಬರು ಮೃತಪಟ್ಟಿದ್ದರೆ ಅವರ ಮಗು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಇದೀಗ ಘಟನೆಯ ಬಗ್ಗೆ ಮಹಿಳೆಯ ಪತಿ ಮಾತನಾಡಿದ್ದಾರೆ.

ಮೃತ ಮಹಿಳೆಯನ್ನು ರೇವತಿ ಎಂದು ಗುರುತಿಸಲಾಗಿದ್ದು, ಅವರ ಒಂಬತ್ತು ವರ್ಷದ ಮಗ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಮಾತನಾಡಿದ ಮೃತ ಮಹಿಳೆಯ ಪತಿ ಭಾಸ್ಕರ್‌ ನಮ್ಮ ಮಗ ಶ್ರೀ ತೇಜ ಅಲ್ಲು ಅರ್ಜುನ್ ಅವರ ದೊಡ್ಡ ಅಭಿಮಾನಿಯಾಗಿದ್ದ. ನಾವು ಅವನ ಒತ್ತಾಯದ ಮೇರೆಗೆ ಸಿನಿಮಾಗೆ ಬಂದಿದ್ದೆವು. ನಮ್ಮ ಮಗನನ್ನು ಎಲ್ಲರೂ ‘ಪುಷ್ಪಾ’ ಎಂದೇ ಕರೆಯುತ್ತಾರೆ. ಏಕಾಏಕಿ ಜನ ಜಂಗುಳಿಯು ಥೇಟರ್‌ ಒಳಗೆ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿತು. ನನ್ನ ಪತ್ನಿ ನನ್ನನ್ನು ಅಗಲಿದ್ದಾಳೆ , ಆ ನೋವನ್ನು ಸಹಿಸಲಾಗುತ್ತಿಲ್ಲ ಎಂದು ನೋವನ್ನು ತೋಡಿಕೊಂಡಿದ್ದಾರೆ.

ಅಲ್ಲು ಅರ್ಜುನ್ ನಟನೆಯ ‘ಪುಷ್ಪ-2’ ಸಿನಿಮಾ ಪ್ರೀಮಿಯರ್ ಪ್ರದರ್ಶನಕ್ಕೆ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದ ವೇಳೆ ಆಂಧ್ರಪ್ರದೇಶದ ಆರ್‌ಟಿಸಿ ಕ್ರಾಸ್ ರಸ್ತೆಯ ಸಂಧ್ಯಾ ಥಿಯೇಟರ್‌ನಲ್ಲಿಕಾಲ್ತುಳಿತ ಸಂಭವಿಸಿತ್ತು. ಸಂಧ್ಯಾ ಚಿತ್ರಮಂದಿರದಲ್ಲಿ ಪುಷ್ಪ-2 ಪ್ರೀಮಿಯರ್ ಪ್ರದರ್ಶನ ಆಯೋಜಿಸಲಾಗಿತ್ತು. ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಲು ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಈ ವೇಳೆ ನೆಚ್ಚಿನ ನಟನನ್ನು ಕಾಣಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ನೆರೆದಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ.

ಈ ಸುದ್ದಿಯನ್ನೂ ಓದಿ Pushpa 2: ಪುಷ್ಪ-2 ರಿಲೀಸ್‌ನಿಂದ ಪಿವಿಆರ್‌ ಐನಾಕ್ಸ್‌ ಷೇರು ಹೈ ಜಂಪ್?‌