Monday, 12th May 2025

ಕಾಂಪ್ಲೆಕ್ಸ್’ನಲ್ಲಿ ಭಾರಿ ಅಗ್ನಿ ಅವಘಡ: 40 ಅಂಗಡಿಗಳು ಸುಟ್ಟು ಭಸ್ಮ

ಪುರಿ(ಒಡಿಶಾ): ನಗರದ ಪ್ರಮುಖ ವ್ಯಾಪಾರ ಕಾಂಪ್ಲೆಕ್ಸ್’ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ಎಲ್ಲಾ 40 ಅಂಗಡಿ ಗಳು ಸುಟ್ಟು ಭಸ್ಮವಾಗಿವೆ.

ಕಳೆದ ರಾತ್ರಿ ಲಕ್ಷೀ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಅದು ಕಟ್ಟಡ ಪೂರ್ತಿ ವ್ಯಾಪಿಸಿ ಎಲ್ಲವನ್ನು ನಾಶಪಡಿಸಿದೆ.

ಬೆಂಕಿ ನಂದಿಸಲು ಹನ್ನೆರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಕಾಂಪ್ಲೆಕ್ಸ್ ನಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ. ಕಟ್ಟಡ ದಿಂದ ಹೊರಬರಲಾಗದೆ ಮೇಲ್ಛಾವಣಿಯ ಮೇಲೆ ಸಿಲುಕಿ ಪ್ರಜ್ಞಾಹೀನ ಸ್ಥಿತಿಯಲಿದ್ದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ಶತಮಾನಗಳಷ್ಟು ಹಳೆಯದಾದ ಮತ್ತು ಸಾಮಿ ಜಗನ್ನಾಥ ದೇವಾಲಯದ ಸಮೀಪದಲ್ಲಿರುವ ಈ ಕಟಡದಲ್ಲಿ ಹೋಟೆಲ್ ಕೂಡ ಇದ್ದು ಅಲ್ಲಿದ್ದ ಮಹಾರಾಷ್ಟ್ರದ ನಾಸಿಕ್‍ನ ಸುಮಾರು 106 ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಅಗ್ನಿಶಾಮಕ ಸೇವೆಯ ಮಹಾನಿರ್ದೇಶಕ ಎಸ್‍ಕೆ ಉಪಾಧ್ಯಾಯ ಮಾತನಾಡಿ, ಬೆಂಕಿ ನಂದಿಸುವ ಕಾರ್ಯಾಚರಣೆ ಯಲ್ಲಿ ತೊಡಗಿದ್ದ ಮೂವರು ಸಿಬ್ಬಂದಿ ಬಿಸಿ ಮತ್ತು ಹೊಗೆಯ ನಡುವೆ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.