Tuesday, 13th May 2025

ಫೆ.1ರಿಂದ ಪುರಿ ಜಗನ್ನಾಥ ದೇವಾಲಯ ಮತ್ತೆ ಓಪನ್‌

ಪುರಿ: ಫೆ.1ರಿಂದ ದೇಶದ ಐತಿಹಾಸಿಕ ದೇವಾಲಯಗಳಲ್ಲಿ ಒಂದಾದ ಪುರಿ ಜಗನ್ನಾಥ ದೇವಾಲಯ ಮತ್ತೆ ತೆರೆಯಲಿದೆ.

ದೇಶದಲ್ಲಿ ಕರೊನಾ ಸೋಂಕಿತ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಜನವರಿ 31ರವರೆಗೆ ದೇವಸ್ಥಾನವನ್ನು ಬಂದ್ ಮಾಡಲಾಗಿತ್ತು. ಪುರಿ ಜಿಲ್ಲಾಧಿಕಾರಿ ಮಹತ್ವದ ಸೂಚನೆ ಹೊರಡಿಸಿ ದ್ದಾರೆ.

ಸ್ಯಾನಿಟೈಸ್ ಮಾಡುವ ಉದ್ದೇಶದಿಂದ ಪ್ರತಿ ಭಾನುವಾರ ದೇವಾಲಯ ಬಂದ್ ಮಾಡಲಾಗು ವುದು. ಎರಡು ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡವರು ಹಾಗೂ 72 ಗಂಟೆಯೊಳಗಿನ ಆರ್​​ಟಿಪಿಸಿಆರ್​​ ರಿಪೋರ್ಟ್ ತೆಗೆದುಕೊಂಡು ಬರುವುದು ಅನಿವಾರ್ಯ ಎಂದಿದ್ದಾರೆ. ದೇವಸ್ಥಾನದ ಆವರಣದಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವುದು ಕಡ್ಡಾಯಗೊಳಿಸಲಾಗಿದೆ.

ಕಳೆದ ಜನವರಿ ತಿಂಗಳಲ್ಲಿ ಈ ಐತಿಹಾಸಿಕ ದೇವಸ್ಥಾನದೊಳಗೆ ಕೋವಿಡ್ ಪ್ರಕರಣ ಪತ್ತೆಯಾದ ಕಾರಣ ಈ ದೇಗುಲ ಬಂದ್ ಮಾಡಲು ನಿರ್ಧಾರ ಕೈಗೊಳ್ಳ ಲಾಗಿತ್ತು.

ದೇಶದಲ್ಲಿ ಮೂರನೇ ಕೋವಿಡ್ ಅಲೆ ಜೋರಾಗಿದ್ದ ಕಾರಣ ದೇಶದ ಬಹುತೇಕ ಎಲ್ಲ ದೇವಾಲಯಗಳು ಬಂದ್​ ಆಗಿದ್ದವು. ಈ ಸಾಲಿನಲ್ಲಿ ಐತಿಹಾಸಿಕ ಒಡಿಶಾದ ಪುರಿ ಜಗನ್ನಾಥ ದೇವಾಲಯ ಸಹ ಸೇರಿಕೊಂಡಿತ್ತು.