Monday, 12th May 2025

ಮಾದಕವಸ್ತು ಸಾಗಿಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

ನವದೆಹಲಿ: ಪಂಜಾಬ್‌ನ ಅಮೃತಸರ ಬಳಿಯ ಅಂತರಾಷ್ಟ್ರೀಯ ಗಡಿಯ ಬಳಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿ ಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ (ಬಿಎಸ್ಎಫ್) ಹೊಡೆದುರುಳಿಸಿದೆ ಎಂದು ಪಡೆ ಭಾನುವಾರ ತಿಳಿಸಿದೆ.

ಅಮೃತಸರ ಜಿಲ್ಲೆಯ ಧನೋ ಕಲಾನ್ ಗ್ರಾಮದಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್ನ ಝೇಂಕ ರಿಸುವ ಶಬ್ದವನ್ನು ಆ ಪ್ರದೇಶದಲ್ಲಿ ನಿಯೋಜಿಸಲಾದ ಬಿಎಸ್ಎಫ್ ಪಡೆಗಳು ಕೇಳಿದವು ಎಂದು ಬಿಎಸ್ಎಫ್ ಹೇಳಿಕೆಯಲ್ಲಿ ತಿಳಿಸಿದೆ.