Monday, 12th May 2025

25ನೇ ರಾಷ್ಟ್ರೀಯ ಯುವ ದಿನ: ₹145 ಕೋಟಿ ವೆಚ್ಚದ ಯೋಜನೆಗಳ ಉದ್ಘಾಟನೆ ಇಂದು

ನವದೆಹಲಿ: ಪುದುಚೇರಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ನಡೆಯಲಿರುವ 25ನೇ ರಾಷ್ಟ್ರೀಯ ಯುವ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಅದರೊಂದಿಗೆ ₹145 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಯೋಜನೆಗಳನ್ನು ಉದ್ಘಾಟಿಸ ಲಿದ್ದಾರೆ.

ಕೋವಿಡ್‌ ಕಾರಣಗಳಿಂದ ವರ್ಚುವಲ್‌ ಆಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಧಾನಿ ಮೋದಿ ಬುಧವಾರ ಬೆಳಿಗ್ಗೆ ಕಾರ್ಯಕ್ರಮವನ್ನುದ್ದೇಶಿ ಮಾತನಾಡಲಿದ್ದಾರೆ. ₹122 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ತಂತ್ರಜ್ಞಾನ ಕೇಂದ್ರ ಹಾಗೂ ₹23 ಕೋಟಿ ವೆಚ್ಚದಲ್ಲಿ ನಿರ್ಮಿಸ ಲಾಗಿರುವ ಸಭಾಂಗಣ ಉದ್ಘಾಟಿಸಲಿದ್ದಾರೆ.

ತಂತ್ರಜ್ಞಾನ ಕೇಂದ್ರವು ವಾರ್ಷಿಕ ಸುಮಾರು 6,400 ಯುವಕರ ಕೌಶಲಾಭಿವೃದ್ಧಿ ಮತ್ತು ತರಬೇತಿಗೆ ಸಹಕಾರಿಯಾಗಲಿದೆ.  ‘ಪೆರುಂತಲೈವರ್‌ ಕಾಮರಾಜರ್‌ ಮಣಿಮಂಡಪಂ’ ಹೆಸರಿನ ತೆರೆದ ರಂಗಮಂದಿರವನ್ನು ಒಳಗೊಂಡಿರುವ ಹೊಸ ಸಭಾಂಗಣವು ಉದ್ಘಾಟನೆಯಾಗಲಿದೆ.

ಸಂಜೆ 4ಕ್ಕೆ ತಮಿಳುನಾಡಿನಲ್ಲಿ 11 ಹೊಸ ವೈದ್ಯಕೀಯ ಕಾಲೇಜುಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.