ಭವಿಷ್ಯ ನಿಧಿ (Provident Fund) ಹಣ ಖಾತೆಗಳಿಗೆ ಜಮೆಯಾದ ಬಳಿಕವಷ್ಟೇ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organisation) ಸದಸ್ಯರು ತಮ್ಮ ಪಿಎಫ್ (PF) ಹಣವನ್ನು ಪಡೆಯಬಹುದಿತ್ತು. ಆದರೆ ಇನ್ನು ಮುಂದೆ ಇದಕ್ಕಾಗಿ ಇಪಿಎಫ್‌ಒ ಸದಸ್ಯರು ಕಾಯಬೇಕಿಲ್ಲ. ಯಾಕೆಂದರೆ ಪಿಎಫ್ ಹಣವನ್ನು ಎಟಿಎಂನಲ್ಲೂ (ATM) ತೆಗೆಯಬಹುದಾದ ಯೋಜನೆಯೊಂದನ್ನು ಸರ್ಕಾರ ರೂಪಿಸುತ್ತಿದೆ.
ಇಪಿಎಫ್ ಸದಸ್ಯರು ಇನ್ನು ಎಟಿಎಂಗಳಿಂದ ಹಣವನ್ನು ಹಿಂಪಡೆಯಬಹುದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ.
ಪ್ರಸ್ತುತ ಸರ್ಕಾರವು ಇಪಿಎಫ್ ಒ 3.0 ಯೋಜನೆಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಇದು ಹಲವಾರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಿದೆ. ಇದರೊಂದಿಗೆ ಎಟಿಎಂ ಸೇವೆ ಪಡೆಯುವ ಅವಕಾಶವನ್ನು ಸಹ ನೀಡಲಾಗುತ್ತದೆ.
ಏನು ಯೋಜನೆ?
ಇಪಿಎಫ್ಒ ಸದಸ್ಯರು ಶೀಘ್ರದಲ್ಲೇ ತಮ್ಮ ಪಿಎಫ್ ಹಣವನ್ನು ನೇರವಾಗಿ ಎಟಿಎಂಗಳಿಂದ ಹಿಂಪಡೆಯಲು ಸಾಧ್ಯವಾಗುತ್ತದೆ. ಹಣ ಹಿಂಪಡೆಯುವ ಪ್ರಕ್ರಿಯೆಯನ್ನು ಹೆಚ್ಚು ಅನುಕೂಲಕರವಾಗಿಸಲು ಈ ಮೂಲಕ ಪ್ರಯತ್ನಿಸಲಾಗುತ್ತದೆ.
ವರದಿಗಳ ಪ್ರಕಾರ ಕಾರ್ಮಿಕ ಸಚಿವಾಲಯವು ಎಟಿಎಂಗಳ ಮೂಲಕ ಪಿಎಫ್ ಹಣವನ್ನು ಹಿಂಪಡೆಯಲು ಅನುಮತಿಸುವ ಕಾರ್ಡ್‌ಗಳನ್ನು ರೂಪಿಸುವ ಯೋಜನೆ ಪ್ರಾರಂಭಿಸಿದೆ ಎನ್ನಲಾಗಿದೆ. ಇದರ ಸೇವೆ ಮುಂದಿನ ಮೇ- ಜೂನ್ ಗೆ ಪ್ರಾರಂಭವಾಗುವ ನಿರೀಕ್ಷೆ ಇದೆ. ಇದರಿಂದ ಇಪಿಎಫ್ ಒ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಇನ್ನೇನಿದೆ ಯೋಜನೆಯಲ್ಲಿ?
ಭವಿಷ್ಯ ನಿಧಿಗೆ ಉದ್ಯೋಗಿಗಳ ಕೊಡುಗೆಗಳ ಮೇಲಿನ ಶೇ. 12 ಮಿತಿಯನ್ನು ತೆಗೆದುಹಾಕುವ ಅಧಿಕಾರವನ್ನು ಇಪಿಎಫ್ ಒ ಹೊಂದಿದೆ. ಉದ್ಯೋಗಿಗಳು ತಮ್ಮ ಆದ್ಯತೆಯ ಉಳಿತಾಯ ವಿಧಾನಗಳ ಪ್ರಕಾರ ತಮ್ಮ ಪಿಎಫ್ ಖಾತೆಗಳಿಗೆ ಹಣವನ್ನು ಠೇವಣಿ ಮಾಡುವ ಆಯ್ಕೆಯನ್ನು ಪಡೆಯುವ ಸಾಧ್ಯತೆ ಇದೆ. ಆದರೆ ಇದು ಜಾರಿಯಾಗುವುದೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಯಾಕೆಂದರೆ ಈಗಷ್ಟೇ ಈ ಕುರಿತು ಚರ್ಚೆ ಆರಂಭಿಸಲಾಗಿದೆ.
ಈಗ ಹೇಗಿದೆ?
ಪ್ರಸ್ತುತ ಇಪಿಎಫ್ಒ ಸದಸ್ಯರ ತಮ್ಮ ಸಂಬಳದ ಶೇ. 12ರಷ್ಟು ಮೂಲ ವೇತನ ಮತ್ತು ತುಟ್ಟಿಭತ್ಯೆ ಸೇರಿ ಅವರ ಇಪಿಎಫ್ ಖಾತೆಗೆ ನೀಡುತ್ತಿದ್ದಾರೆ. ಇದು ಸಂಬಳದಲ್ಲಿ ನೇರವಾಗಿ ಕಡಿತಗೊಳಿಸಲಾಗುತ್ತದೆ. ಶೇ. 12ರಷ್ಟನ್ನು ಉದ್ಯೋಗದಾತರು ನೀಡುತ್ತಾರೆ. ಇದರಲ್ಲಿ ಶೇ. 8.33ರಷ್ಟನ್ನು ಇಪಿಎಸ್-95ಗೆ ಹಾಗೂ ಉಳಿದ ಶೇ. 3.67ರಷ್ಟನ್ನು ಇಪಿಎಫ್ ಖಾತೆಯಲ್ಲಿ ಇರಿಸಲಾಗುತ್ತದೆ.
Hydrogen Train: 2,638 ಪ್ರಯಾಣಿಕರ ಸಂಚಾರಕ್ಕೆ ಸಿದ್ದಗೊಂಡಿದೆ ದೇಶದ ಮೊದಲ ಹೈಡ್ರೋಜನ್ ರೈಲು
ಸಾಮಾಜಿಕ ಭದ್ರತೆಯ ಪ್ರಯೋಜನಗಳನ್ನು ಹೆಚ್ಚಿಸುವುದರ ಜೊತೆಗೆ ನರೇಂದ್ರ ಮೋದಿ ಸರ್ಕಾರದ ಗಮನವು ರಾಷ್ಟ್ರದಲ್ಲಿ ಉದ್ಯೋಗ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇತ್ತೀಚೆಗೆ, ಕಾರ್ಮಿಕ ಸಚಿವಾಲಯವು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಉದ್ಯೋಗ-ಸಂಯೋಜಿತ ಪ್ರೋತ್ಸಾಹ (ಇಎಲ್‌ಐ) ಯೋಜನೆ ಮೂಲಕ ಮೂಲಸೌಕರ್ಯ ಮತ್ತು ಸಾಮರ್ಥ್ಯ ವರ್ಧನೆಗೆ ಸಿದ್ಧವಾಗುವಂತೆ ಉದ್ಯೋಗದಾತ ಸಂಸ್ಥೆಗಳು ಗಮನ ಕೇಂದ್ರೀಕರಿಸಲು ಸೂಚಿಸಿದೆ ಎನ್ನಲಾಗಿದೆ.