Thursday, 15th May 2025

12 ಸಂಸದರ ಅಮಾನತು: ಇಂದು ಕೂಡ ಪ್ರತಿಭಟನೆ

ನವದೆಹಲಿ: ರಾಜ್ಯಸಭೆಯ ವಿಪಕ್ಷಗಳ 12 ಸಂಸದರ ಅಮಾನತನ್ನು ಖಂಡಿಸಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಸಂಸತ್ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಗುರುವಾರವೂ ಪ್ರತಿಭಟನೆ ನಡೆಸಿವೆ.

ಅಮಾನತುಗೊಂಡಿರುವ ಸಂಸದರು ಕ್ಷಮೆಯಾಚಿಸಬೇಕು ಎಂದು ಇದೇ ವೇಳೆ ಕೇಂದ್ರ ಸರ್ಕಾರವು ಒತ್ತಾಯಿಸಿದೆ.

ಅಮಾನತಿಗೆ ಸಂಬಂಧಿಸಿದ ವಿಚಾರದಲ್ಲಿ ಪ್ರತಿಪಕ್ಷಗಳ ನಾಯಕರು ಸದನದ ಘನತೆ ಯನ್ನು ಕುಗ್ಗಿಸಿರುವುದು ವಿಷಾದನೀಯ’ ಎಂದು ರಾಜ್ಯಸಭೆಯ ಸಭಾನಾಯಕ ಪಿಯೂಷ್ ಗೋಯಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮಾನತುಗೊಂಡಿರುವ ಸದಸ್ಯರು ಸದನದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. ಪ್ರತಿಪಕ್ಷಗಳು ಮೇಲ್ಮನೆಯಲ್ಲಿ ಗದ್ದಲ ಎಬ್ಬಿಸಿದ್ದರಿಂದ ಕಲಾಪ ವನ್ನು ಮುಂದೂಡಲಾಗಿದೆ.