Sunday, 11th May 2025

ಇಂದು, ನಾಳೆ ರಾಷ್ಟ್ರಪತಿ ಒಡಿಶಾ, ಆಂಧ್ರಪ್ರದೇಶ ಭೇಟಿ

ಒಡಿಶಾ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಶನಿವಾರ ಒಡಿಶಾಕ್ಕೆ ಭೇಟಿ ನೀಡಲಿದ್ದು, ಬಳಿಕ ಆಂಧ್ರಪ್ರದೇಶಕ್ಕೆ ತೆರಳಲಿದ್ದಾರೆ. ಫೆ.19 ಮತ್ತು 20 ಒಡಿಶಾದಲ್ಲಿ ಇರಲಿದ್ದು, ಫೆ.21 ಮತ್ತು ಫೆ.22ರಂದು ಆಂಧ್ರಪ್ರದೇಶಕ್ಕೆ ತೆರಳಲಿದ್ದಾರೆ.

ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ರಾಷ್ಟ್ರಪತಿ ಕೋವಿಂದ್‌ ರನ್ನು ಸ್ವಾಗತಿಸಲಿದ್ದಾರೆ. ಒಡಿಸಾದ ಶ್ರೀ ಚೈತನ್ಯ ಗೌಡಿಯಾ ಮಠದಲ್ಲಿ ನಡೆಯ ಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಭಾಗಿಯಾಗಲಿದ್ದಾರೆ. ಸಂಜೆ 4 ರಿಂದ 6ರರವರೆಗೆ ಮಠಕ್ಕೆ ಸಾರ್ವಜನರಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಫೆ.20ರಂದು ಶ್ರೀಮದ್‌ ಭಕ್ತಿ ಸಿದ್ಧಾರ್ಥ ಸರಸ್ವತಿ ಗೋಸ್ವಾಮಿ ಪ್ರಭುಪಾದರ 150ನೇ ಜನ್ಮವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

ಫೆ.21ರಂದು ಒಡಿಶಾದಿಂದ ನೇರವಾಗಿ ಆಂಧ್ರಪ್ರದೇಶಕ್ಕೆ ತೆರಳಲಿರುವ ರಾಷ್ಟ್ರಪತಿ ಕೋವಿಂದ್‌, ವಿಶಾಖಪಟ್ಟಣಂ ನ ಫ್ಲೀಟ್‌ ರಿವಿವ್ಯೂ ಮತ್ತು ಫ್ಲೈಪಾಸ್ಟ್‌ ನಲ್ಲಿ ಭಾಗಿಯಾಗಲಿದ್ದಾರೆ.