Thursday, 15th May 2025

ಅಕ್ಟೋಬರ್ 15 ರಿಂದ ಪ್ರವಾಸಿ ಗುಜರಾತಿ ಪರ್ವ್ ಆರಂಭ

ಅಹಮದಾಬಾದ್‌: ‘ಪ್ರವಾಸಿ ಗುಜರಾತಿ ಪರ್ವ್’ ಅಕ್ಟೋಬರ್ 15 ರ ಶನಿವಾರ ಅಹಮದಾಬಾದ್‌ನಲ್ಲಿ ಪ್ರಾರಂಭವಾಗಲಿದೆ ಮತ್ತು ಅಕ್ಟೋಬರ್ 17 ರವರೆಗೆ ನಡೆಯಲಿದೆ.

20ಕ್ಕೂ ಹೆಚ್ಚು ದೇಶಗಳು ಮತ್ತು ಭಾರತದ 18 ರಾಜ್ಯಗಳ ಸುಮಾರು 2,500 ಗುಜರಾತಿಗಳು ‘ಪ್ರವಾಸಿ ಗುಜರಾತಿ ಪರ್ವ್’ನಲ್ಲಿ ಭಾಗವಹಿಸಲಿದ್ದಾರೆ.

ಪ್ರವಾಸಿ ಗುಜರಾತಿ ಪರ್ವ್ ವ್ಯಾಪಾರ ಸಮಾವೇಶಗಳು ಮತ್ತು ಪ್ರದರ್ಶನಗಳಿಂದ ಹಿಡಿದು ಸಾಂಸ್ಕೃತಿಕ ಕಾರ್ಯ ಕ್ರಮಗಳು ಮತ್ತು ಸೆಲೆಬ್ರಿಟಿಗಳ ಪ್ರದರ್ಶನಗಳವರೆಗೆ ವಿಶೇಷ ಕಾರ್ಯಕ್ರಮಗಳಿಂದ ತುಂಬಿರುತ್ತದೆ.

ಈ ‘ಪ್ರವಾಸಿ ಗುಜರಾತಿ ಹಬ್ಬ’ವನ್ನು ನಾಲ್ಕು ಕಾರಣಗಳಿಗಾಗಿ ನಡೆಸಲಾಗುತ್ತದೆ: ದೊಡ್ಡಮಟ್ಟದಲ್ಲಿ ವಿದೇಶ ಗಳಲ್ಲಿ ನೆಲೆಸಿರುವ ಗುಜರಾತಿಗಳು ಮತ್ತು ಸ್ಥಳೀಯ ಗುಜರಾತಿಗಳು ನಡುವೆ ಸಂಪರ್ಕ ಸ್ಥಾಪಿಸಲು, ಭಾರತ ಮತ್ತು ವಿದೇಶಗಳಲ್ಲಿ ಗುಜರಾತಿ ಮೂಲದ ಜನರ ನಡುವೆ ಸಂವಹನದ ಚಾನಲ್ ತೆರೆಯಲು, ಗುಜರಾತ್ ರಾಜ್ಯದ ಅಭಿವೃದ್ಧಿಗೆ ಕೊಡುಗೆ ಸಲ್ಲಿಸುವುದನ್ನು ಪ್ರೋತ್ಸಾಹಿಸಲು ಮತ್ತು ಗುಜರಾತಿ ಹೆಮ್ಮೆ ಮತ್ತು ಪರಂಪರೆ ಯನ್ನು  ಆಚರಿಸಲು. ಇದು ಪ್ರವಾಸಿ ಗುಜರಾತ್ ಪರ್ವ್‌ನ ಮೊದಲ ಆವೃತ್ತಿಯಾಗಿದೆ.

‘ಪ್ರವಾಸಿ ಗುಜರಾತಿ ಪರ್ವ್’ ನಲ್ಲಿ ಕನೆಕ್ಟ್‌ನ ಪ್ರಾಥಮಿಕ ಉದ್ದೇಶವು ಅತ್ಯುತ್ತಮ ಮತ್ತು ಪ್ರಕಾಶಮಾನ ಉದ್ಯಮಿ/ ವ್ಯಾಪಾರಿಗಳನ್ನು ಸಂಯೋಜಿಸುವ ಮೂಲಕ ಉತ್ತಮ ನೆಟ್‌ವರ್ಕಿಂಗ್ ವೇದಿಕೆಯನ್ನು ರಚಿಸುವುದು.

ವಿವಿಧ ಸಮುದಾಯಗಳು ಮತ್ತು ಸಂಸ್ಥೆಗಳ ಪ್ರಭಾವಿ ವ್ಯಕ್ತಿಗಳು ಈ ‘ಪ್ರವಾಸಿ ಗುಜರಾತಿ ಪರ್ವ್’ ನಲ್ಲಿ ಸಮಾವೇಶಗಳು ಮತ್ತು ಸಮ್ಮೇಳನಗಳ ಮೂಲಕ ಪರಸ್ಪರ ಸಂವಹನ ನಡೆಸಲು ಒಂದೇ ಸೂರಿನಡಿ ಸೇರುತ್ತಾರೆ.

ಈವೆಂಟ್‌ನಲ್ಲಿ ಭಾಗವಿಸುವ ಎಲ್ಲಾ ಪ್ರಮುಖ ವ್ಯಕ್ತಿಗಳು ಗುಜರಾತ್ ಅನ್ನು ಹೊಸ ಎತ್ತರಕ್ಕೆ ಹೇಗೆ ಮುನ್ನಡೆಸುವುದು ಎಂಬುದರ ಕುರಿತು ವಿಚಾರ ಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ವಿನಿಮಯ ಮಾಡಿಕೊಳ್ಳುತ್ತಾರೆ.