Wednesday, 14th May 2025

Pragya Nagra: ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ ಖ್ಯಾತ ನಟಿಯ ಖಾಸಗಿ ವಿಡಿಯೊ

Pragya Nagra

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಪ್ರಮುಖ ನಟಿ ಪ್ರಜ್ಞಾ ನಾಗ್ರಾ (Pragya Nagra) ಅವರ ಖಾಸಗಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿದ್ದು, ವೈರಲ್‌ ಆಗಿದೆ. ಈ ವಿಷಯದ ಬಗ್ಗೆ ಪ್ರಜ್ಞಾ ಇನ್ನೂ ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ  ಸೋರಿಕೆಯಾದ ನಂತರ ಪ್ರಸಿದ್ಧ ವ್ಯಕ್ತಿಗಳ ಗೌಪ್ಯತೆ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ, ಪಾಕಿಸ್ತಾನದ ಪ್ರಸಿದ್ಧ ವ್ಯಕ್ತಿಗಳ ಹಲವಾರು ಖಾಸಗಿ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಪ್ರಸಿದ್ಧ ವ್ಯಕ್ತಿಗಳು ಖ್ಯಾತಿಯಿಗಾಗಿ ತಮ್ಮದೇ ವಿಡಿಯೊಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದರೆ, ಇತರರು ಇದನ್ನು ಪ್ರಚಾರದ ಸ್ಟಂಟ್ ಎಂದು ಕರೆದಿದ್ದಾರೆ.

ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹಲವರ ಖಾಸಗಿ ವಿಡಿಯೊಗಳು ಸೋರಿಕೆಯಾಗಿದೆ. 2024ರ ಅಕ್ಟೋಬರ್‌ನಲ್ಲಿ ಸೋಶಿಯಲ್ ಮೀಡಿಯಾದ ಪ್ರಸಿದ್ಧ ವ್ಯಕ್ತಿ ಮಿನಾಹಿಲ್ ಮಲಿಕ್ ಅವರ ವಿಡಿಯೊ ಮೊದಲ ಬಾರಿಗೆ ಸೋರಿಕೆಯಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಅವರು ಅದನ್ನು  ನಕಲಿ ವಿಡಿಯೊ ಎಂದು ಹೇಳಿದ್ದರು ಮತ್ತು ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಗೆ (ಎಫ್ಐಎ) ದೂರು ನೀಡಿದ್ದಾರೆ.

ಇದಾದ ನಂತರ, ಪಾಕಿಸ್ತಾನದ ನಟಿ-ಗಾಯಕಿ ಮಿಶಿ ಖಾನ್ ಅವರು ಮಿನಾಹಿಲ್ ತನ್ನ ವಿಡಿಯೊವನ್ನು ಪ್ರಚಾರಕ್ಕಾಗಿ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಮಿಶಿ ಕರೀನಾ ಕಪೂರ್ ಖಾನ್ ಅವರ ʼಹೀರೋಯಿನ್ʼ ಚಿತ್ರದಲ್ಲಿ ಇದೇ ರೀತಿಯ ದೃಶ್ಯವಿದ್ದು,  ಹಾಗಾಗಿ ಅವರು ಇದೇ ರೀತಿಯ ಹಗರಣವನ್ನು ಮಾಡಿದ್ದಾರೆ ಎಂದಿದ್ದಾರೆ.

ಮಿನಾಹಿಲ್ ಮಲಿಕ್ ನಂತರ, ಕನ್ವಾಲ್ ಅಫ್ತಾಬ್, ಮತಿರಾ ಮೊಹಮ್ಮದ್, ಇಮ್ಶಾ ರೆಹಮಾನ್ ಮತ್ತು ಮರಿಯಮ್ ಫೈಸಲ್ ಅವರ ಖಾಸಗಿ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿವೆ.

ಇದನ್ನೂ ಓದಿ:ಶಾಲಾ ಮಕ್ಕಳ ಬಾಯಲ್ಲಿ ಅನುರಣಿಸಿದ ಗಾಯಕ ದಿಲ್ಜಿತ್ ದೋಸಾಂಜ್ ಹಿಟ್ ಹಾಡು; ಹೃದಯಸ್ಪರ್ಶಿ ವಿಡಿಯೊ ವೈರಲ್

ಪ್ರಜ್ಞಾ ನಾಗ್ರಾ ಸದ್ಯ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಜ್ಞಾ ಅಬಿನಯದ ತೆಲುಗು ಚಿತ್ರ ಲಗ್ನಂ ಇತ್ತೀಚೆಗೆ ತೆರೆಕಂಡಿತ್ತು. ಇದರಲ್ಲಿ ಸಾಯಿ ರೋನಕ್, ರಾಜೇಂದ್ರ ಪ್ರಸಾದ್, ರೋಹಿಣಿ, ವಡ್ಲಮಣಿ ಶ್ರೀನಿವಾಸ್, ರಘು ಬಾಬು, ಎಲ್ಬಿ ಶ್ರೀರಾಮ್, ಸಪ್ತಗಿರಿ, ಕೃಷ್ಣುಡು ಮತ್ತು ರಚ್ಚಾ ರವಿ ಮತ್ತಿತರರು ನಟಿಸಿದ್ದರು. ಪ್ರಜ್ಞಾ 2022ರಲ್ಲಿ ತಮಿಳು ಚಿತ್ರ ʼವರಲೂರು ಮುಕ್ಕಿಯುಮ್ʼ ಮೂಲಕ ಪಾದಾರ್ಪಣೆ ಮಾಡಿದರು. 2023ರಲ್ಲಿ ಅವರು ಮಲಯಾಳಂ ಚಿತ್ರ ʼನದಿಗಳಿಲ್‌ ಸುಂದರಿ ಯಮುನಾʼದಲ್ಲಿ ನಟಿಸಿದ್ದರು.