Sunday, 11th May 2025

ಮೃಗಾಲಯಗಳ ಅಭಿವೃದ್ಧಿ, ವಿಸ್ತರಣೆಗೆ ಖಾಸಗಿ ಸಹಭಾಗಿತ್ವ: ಪ್ರಕಾಶ್‌ ಜಾವಡೇಕರ್‌

ನವದೆಹಲಿ: ದೇಶದಲ್ಲಿರುವ ಮೃಗಾಲಯಗಳ ಅಭಿವೃದ್ಧಿ ಹಾಗೂ ವಿಸ್ತರಣೆಗೆ ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರ ಯೋಜನೆ ರೂಪಿಸಲಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಸೋಮವಾರ ತಿಳಿಸಿದರು.

ಆನ್‌ಲೈನ್‌ ಕಾರ್ಯಕ್ರಮ ‘ವೈಲ್ಡ್‌ಲೈಫ್‌ ವೀಕ್‌ 2020’ರಲ್ಲಿ ಮಾತನಾಡಿ, ‘ಈ ಯೋಜನೆಗೆ ಪ್ರತ್ಯೇಕ ಅನುದಾನ ಮೀಸಲಿರಿಸಲಾಗುವುದು ಹಾಗೂ ಮುಂದಿನ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗುವುದು’ ಎಂದರು.

‘ದೇಶದಲ್ಲಿ 160 ಮೃಗಾಲಯಗಳಿವೆ. ಮಕ್ಕಳು ಇವುಗಳಿಗೆ ಭೇಟಿ ನೀಡಲು ಉತ್ಸುಕರಾಗಿರುತ್ತಾರೆ. ಇವರ ಅನುಭವವನ್ನು ಇಮ್ಮಡಿಗೊಳಿಸುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಯೋಜನೆ ರೂಪಿಸುವಾಗ ರಾಜ್ಯ ಸರ್ಕಾರಗಳ ಸಲಹೆ, ಸೂಚನೆಗಳನ್ನೂ ಪರಿಗಣಿಸ ಲಾಗುವುದು.  ಈ ನಿಟ್ಟಿನಲ್ಲಿ, ಅಭಿವೃದ್ದಿ ಹಾಗೂ ವಿಸ್ತರಣೆಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

ಇದೇ ವೇಳೆ, ದೆಹಲಿ ನ್ಯಾಷನಲ್‌ ಜೂವಾಲಜಿಕಲ್ ಪಾರ್ಕ್‌’ನ ಒಟ್ಟು ಆರ್ಥಿಕ ಮೌಲ್ಯಮಾಪನದ ವರದಿ ಯನ್ನು ಬಿಡುಗಡೆ ಮಾಡಲಾಯಿತು. ನವದೆಹಲಿಯಲ್ಲಿ ೧೭೬ ಎಕರೆ ಜಾಗದಲ್ಲಿ ಈ ಪಾರ್ಕ್ ನಿರ್ಮಿಸಲಾ ಗಿದೆ.

 

Leave a Reply

Your email address will not be published. Required fields are marked *