Sunday, 11th May 2025

ಕಳಪೆ ಆಹಾರ: ಕೇಟರಿಂಗ್ ವ್ಯವಸ್ಥಾಪಕರಿಗೆ ಶಾಸಕರ ಕಪಾಳಮೋಕ್ಷ

ಮುಂಬೈ: ಕಳಪೆ ಗುಣಮಟ್ಟದ ಆಹಾರ ನೀಡಿದ್ದಕ್ಕಾಗಿ ಏಕನಾಥ್ ಶಿಂಧೆ ಪಾಳೆಯದ ಶಿವಸೇನೆ ಶಾಸಕರೊಬ್ಬರು ಕೇಟರಿಂಗ್ ಸೇವೆಯ ವ್ಯವಸ್ಥಾಪಕ ರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಮಧ್ಯಾಹ್ನದ ಊಟದ ಕಾರ್ಯ ಕ್ರಮದ ಅಂಗವಾಗಿ ಕಾರ್ಮಿಕರಿಗೆ ಬಡಿಸಲಾಗುತ್ತಿರುವ ಕಳಪೆ ಗುಣಮಟ್ಟದ ಆಹಾರಕ್ಕಾಗಿ ಮ್ಯಾನೇಜರ್‌ಗೆ ಶಾಸಕ ಸಂತೋಷ್ ಬಂಗಾರ್ ನಿಂದಿಸಿ ಕಪಾಳಮೋಕ್ಷ ಮಾಡಿದ್ದನ್ನು ವಿಡಿಯೋದಲ್ಲಿ ಕಾಣಬಹುದು.