Tuesday, 13th May 2025

ಕೆಎಂಸಿ ಚುನಾವಣೆ ಮತ ಎಣಿಕೆ: ಮುನ್ನಡೆಯಲ್ಲಿ ಟಿಎಂಸಿ

KMC

ಕೋಲ್ಕತ್ತ: ಕೋಲ್ಕತ್ತ ಪಾಲಿಕೆ (ಕೆಎಂಸಿ)ಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳ ವಾರ ಆರಂಭವಾಗಿದೆ.

ತೃಣಮೂಲ ಕಾಂಗ್ರೆಸ್ ಭಾರಿ ಗೆಲುವಿನತ್ತ ಸಾಗುತ್ತಿದೆ. ಮತ ಎಣಿಕೆಯ ಟ್ರೆಂಡ್‌ ಪ್ರಕಾರ ಆಡಳಿತಾ ರೂಢ ಟಿಎಂಸಿ ಏಳು ಸ್ಥಾನಗಳಲ್ಲಿ ಜಯ ಸಾಧಿಸಿ 108 ಸ್ಥಾನಗಳಲ್ಲಿ ಮುನ್ನಡೆ ಕಾದುಕೊಂಡಿದೆ.

ಬಿಜೆಪಿ ನಾಲ್ಕರಲ್ಲಿ ಮುಂದಿದ್ದರೆ, ಸಿಪಿಎಂ, ಕಾಂಗ್ರೆಸ್‌ ತಲಾ ಎರಡು ಸ್ಥಾನಗಳಲ್ಲಿ ಪಕ್ಷೇತರರು ಮೂರು ಸ್ಥಾನಗಳಲ್ಲಿ ಮುನ್ನಡೆ ಕಾಯ್ದೆಕೊಂಡಿದ್ದಾರೆ. ಕೋಲ್ಕತ್ತ ಮುನ್ಸಿಪಲ್ ಕಾರ್ಪೊರೇಷನ್ ಒಟ್ಟು 144 ವಾರ್ಡ್‌ಗಳನ್ನು ಹೊಂದಿದೆ.

ಕಳೆದ ಬಾರಿ ತೃಣಮೂಲ ಕಾಂಗ್ರೆಸ್‌ 114 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್‌ 5, ಎಡ ಪಕ್ಷಗಳು 15, ಬಿಜೆಪಿ 7 ವಾರ್ಡ್‌ಗಳಲ್ಲಿ ಗೆದ್ದಿತ್ತು. ಮೂವರು ಪಕ್ಷೇತರರು ಗೆದ್ದಿದ್ದರು. ಆದರೆ, ಈ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಹಿಂದಿನ ದಾಖಲೆ ಮುರಿಯುವ ಮುನ್ಸೂಚನೆ ನೀಡಿದೆ.