Saturday, 17th May 2025

Police News : ಡಾನ್ಸರ್ ಮೇಲೆ ಮೂರು ದಿನ ಅತ್ಯಾಚಾರ ಮಾಡಿದ ಈವೆಂಟ್ ಮ್ಯಾನೇಜರ್‌

Police News

ಆಗ್ರಾ: 26 ವರ್ಷದ ಡಾನ್ಸರ್ ಒಬ್ಬಳನ್ನು ಮೂರು ದಿನಗಳ ಕಾಲ ತನ್ನ ಫ್ಲ್ಯಾಟ್‌ನಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಆಗ್ರಾದಲ್ಲಿ ನಡೆದಿದೆ. ಪೊಲೀಸರು (Police News) ಈ ಬಗ್ಗೆ ಭಾನುವಾರ ಮಾಹಿತಿ ನೀಡಿದ್ದಾರೆ. ವೃತ್ತಿಯಲ್ಲಿ ಈವೆಂಟ್ ಮ್ಯಾನೇಜರ್ ಆಗಿರುವ ವಿನಯ್ ಗುಪ್ತಾ ಆರೋಪಿ ಎಂದು ಅವರು ಹೇಳಿದ್ದಾರೆ.

ಪೊಲೀಸರ ಪ್ರಕಾರ, ಗುಪ್ತಾ ಆಗ್ರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಾನ್ಸರ್ ಆಗಿ ಕೆಲಸ ಮಾಡುವ ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಸಂತ್ರಸ್ತೆಯ ಪರಿಚಯ ಮಾಡಿಕೊಂಡಿದ್ದ ಅಕ್ಟೋಬರ್ 8 ರಂದು ಗುಪ್ತಾ ಆಕೆಯನ್ನು ತನ್ನ ನಿವಾಸಕ್ಕೆ ಕರೆದೊಯ್ದಿದ್ದ. ಅಲ್ಲಿ ಆತನ ಪತ್ನಿ ಡಾನ್ಸರ್‌ಗೆ ನಿದ್ರೆ ಮಾತ್ರೆ ಬೆರೆಸಿದ್ದ ಚಹಾ ನೀಡಿದ್ದಳು. ಹೀಗಾಗಿ ಆಕೆ ಎಚ್ಚರ ತಪ್ಪಿದ್ದಳು.

ಎಚ್ಚರಗೊಂಡಾಗ ಕೋಣೆಯಲ್ಲಿ ತನ್ನನ್ನು ಕಟ್ಟಿಹಾಕಿರುವುದು ಡಾನ್ಸರ್‌ಗೆ ಗೊತ್ತಾಗಿದೆ. ತಪ್ಪಿಸಿಕೊಂಡು ಹೊರಗೆ ಬಂದು ಆಕೆ ದೂರು ನೀಡಿದ್ದಾಳೆ.

ಗುಪ್ತಾ ತನ್ನನ್ನು ಮೂರು ದಿನಗಳ ಕಾಲ ಒತ್ತೆಯಾಳಾಗಿ ಇಟ್ಟುಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ಆಕೆ ದೂರಿದ್ದಾಳೆ. ಹೆಚ್ಚು ಹಣ ಸಂಪಾದಿಸಲು ವೇಶ್ಯಾವಾಟಿಕೆಗೆ ಇಳಿಯುವಂತೆ ಆತ ಒತ್ತಾಯಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Baba Siddique: ಬಾಬಾ ಸಿದ್ದಿಕಿ ಹಂತಕರ ಕುಟುಂಬಸ್ಥರು ಹೇಳೋದೇನು? ಇಲ್ಲಿದೆ ವಿಡಿಯೋ

ಗುಪ್ತಾ ಇತರ ಮಹಿಳೆಯರನ್ನು ವೇಶ್ಯಾವಾಟಿಕೆಗೆ ಬಲವಂತಪಡಿಸಿದ್ದಾನೆ ಎಂಬುದಾಗಿಯೂ ಆಕೆ ದೂರಿದ್ದಾಳೆ. ಡಾನ್ಸರ್ ತಾಜ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಎಂದು ಆಗ್ರಾದ ಸಹಾಯಕ ಪೊಲೀಸ್ ಆಯುಕ್ತ ಸೈಯದ್ ಆರೀಬ್ ಅಹ್ಮದ್ ಕ್ರಮ ಕೈಗೊಂಡಿದ್ದಾರೆ.

ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ವಿನಯ್ ಗುಪ್ತಾನನ್ನು ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಹ್ಮದ್ ಹೇಳಿದರು.