Sunday, 11th May 2025

ಇಂದು ತಮಿಳುನಾಡಿಗೆ ಪ್ರಧಾನಿ ಭೇಟಿ, ಹಲವು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ

ಚೆನ್ನೈ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ತಮಿಳು ನಾಡಿಗೆ ಭೇಟಿ ನೀಡಲಿದ್ದಾರೆ. ಸುಮಾರು 4,486.40 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಮೂರು ಕಾಮಗಾರಿಗಳ ಉದ್ಘಾಟನೆ ಹಾಗೂ  3,640 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿರುವ ಮತ್ತೆರಡು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

https://twitter.com/i/status/1360829968805072896

ಚೆನ್ನೈ ಮಟ್ರೊ ರೈಲು ಮೊದಲನೇ ಹಂತವನ್ನು 3,770 ಕೋಟಿ ರೂಪಾಯಿ ವೆಚ್ಚದಲ್ಲಿ ವಿಸ್ತರಣೆ ಮಾಡಲಾಗಿದ್ದು ಅದರ ಉದ್ಘಾಟನೆ, ಚೆನ್ನೈ ಸಮುದ್ರ ಮತ್ತು ಅತ್ತಿಪಟ್ಟು ಮಧ್ಯೆ ನಾಲ್ಕನೇ ರೈಲು ಮಾರ್ಗ 293.40 ಕೋಟಿ ರೂಪಾಯಿ ವೆಚ್ಚದಲ್ಲಿ, ವಿಲ್ಲುಪುರಂ-ಕದ್ದಲೂರು-ಮಯಿಲದುತುರೈ-ತಂಜಾವೂರು ಮತ್ತು ಮಯಿಲದುತುರೈ-ತಿರುವರೂರು ಮಾರ್ಗದಲ್ಲಿ 423 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯುದೀಕರಣ ವ್ಯವಸ್ಥೆಯ ಪೂರ್ಣಗೊಂಡಿರುವ ಕಾಮಗಾರಿ ಉದ್ಘಾಟಿಸಲಿದ್ದಾರೆ.

ಬೃಹತ್ ಅನಿಕಟ್ ಕಾಲುವೆ ವ್ಯವಸ್ಥೆಯ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣಕ್ಕೆ (2,640 ಕೋಟಿ ರೂ.) ಮತ್ತು II ಟಿ ಮದ್ರಾಸ್‌ನ ಡಿಸ್ಕವರಿ ಕ್ಯಾಂಪಸ್‌ಗೆ (1,000 ಕೋಟಿ ರೂ.) ಅಡಿಪಾಯ ಹಾಕಲಿದ್ದಾರೆ.

ತಮಿಳುನಾಡಿನಲ್ಲಿ ಬಿಜೆಪಿ ರಾಜಕೀಯ ಸಹ ಉಸ್ತುವಾರಿ ಪಿ ಸುಧಾಕರ್ ರೆಡ್ಡಿ ತಿರುವೊತ್ರಿಯೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪ್ರಧಾನಿ ಭೇಟಿ ಸಂದರ್ಭದಲ್ಲಿ ರಾಜಕೀಯ ಮಾತುಕತೆಗಳು ನಡೆಯುವ ಸಾಧ್ಯತೆ ಕಡಿಮೆ. ಚುನಾವಣಾ ಅಧಿಸೂಚನೆ ಹೊರಬಿದ್ದ ಮೇಲೆ, ಮೈತ್ರಿಯ ಬಗ್ಗೆ ಮಾತುಕತೆ ಆರಂಭವಾಗಲಿದೆ ಎಂದರು.

ಪ್ರಧಾನ ಮಂತ್ರಿಯವರನ್ನು ಅಡಿಗಲಾರ್ ಮತ್ತು ಇತರರು ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಕೂಡ ಅವರನ್ನು ಅಲ್ಲಿಯೇ ಭೇಟಿಯಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *