Friday, 16th May 2025

ಕೊರೊನಾ ಲಸಿಕೆ ಸಿದ್ದಪಡಿಸುವ ಸಂಸ್ಥೆಗಳಿಗೆ ಇಂದು ಪ್ರಧಾನಿ ಭೇಟಿ

ನವದೆಹಲಿ: ಭಾರತದಲ್ಲಿ ಕೊರೊನಾ ಲಸಿಕೆ ಸಿದ್ಧಪಡಿಸುತ್ತಿರುವ ಮೂರು ಪ್ರಮುಖ ಸಂಸ್ಥೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚೊಚ್ಚಲ ಭೇಟಿ ನೀಡಲಿದ್ದಾರೆ.

ಅಹ್ಮದಾಬಾದ್‌ನ ಝೈಡಸ್‌ ಕ್ಯಾಡಿಲಾ, ಪುಣೆಯ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಮತ್ತು ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಸಂಸ್ಥೆಗಳಿಗೆ ಮೋದಿ ಭೇಟಿ ನೀಡಿ, ಲಸಿಕೆ ಅಭಿವೃದ್ಧಿಯ ಪ್ರಗತಿಯನ್ನು ವೀಕ್ಷಿಸಲಿದ್ದಾರೆ.

ಶನಿವಾರ ಬೆಳಗ್ಗೆ ಅಹ್ಮದಾಬಾದ್‌ಗೆ ತಲುಪಲಿದ್ದು, ಚಾಂಗೋದರ್‌ ಕೈಗಾರಿಕಾ ಪ್ರದೇಶದ ಝೈಡಸ್‌ ಕ್ಯಾಡಿಲಾ ಸಂಸ್ಥೆಗೆ ಮೊದಲು ಭೇಟಿ ನೀಡಲಿದ್ದಾರೆ. ಸಂಸ್ಥೆಯು, ಝೈಕೋವಿ-ಡಿ ಲಸಿಕೆ ಶೋಧಿಸು ತ್ತಿದ್ದು, ಇದರ 2ನೇ ಹಂತದ ಪ್ರಯೋಗ ಈಗಾಗಲೇ ಪ್ರಗತಿ ಯಲ್ಲಿದೆ.

ಅಲ್ಲಿಂದ ಮಧ್ಯಾಹ್ನ 12.30ರ ಸುಮಾರಿಗೆ ಪುಣೆ ತಲುಪಲಿದ್ದಾರೆ. ಜಾಗತಿಕ ಫಾರ್ಮಾ ದೈತ್ಯ ಅಸ್ಟ್ರಾ ಜೆನೆಕಾ ಮತ್ತು ಆಕ್ಸ್‌ಫ‌ರ್ಡ್‌ ವಿ.ವಿ. ಸಹಭಾಗಿತ್ವದಲ್ಲಿ ಭಾರತದಲ್ಲಿ ಲಸಿಕೆ ಸಿದ್ಧಪಡಿಸುತ್ತಿರುವ ಸೀರಮ್‌ ಇನ್‌ಸ್ಟಿಟ್ಯೂಟ್‌ಗೆ ಭೇಟಿ ನೀಡಲಿದ್ದಾರೆ. ಈ ಲಸಿಕೆ ಪ್ರಯೋಗ 3ನೇ ಹಂತದಲ್ಲಿದೆ.

ಸಂಜೆಯ ಸುಮಾರಿಗೆ ಹೈದರಾಬಾದ್‌ನ ಹಕೀಮ್‌ಪೇಟ್‌ ಏರ್‌ಫೋರ್ಸ್‌ ಸ್ಟೇಷನ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿಂದ 50 ಕಿ.ಮೀ. ದೂರದ ಜಿನೋಮ್‌ ವ್ಯಾಲಿಯಲ್ಲಿರುವ ಭಾರತ್‌ ಬಯೋಟೆಕ್‌ಗೆ ಭೇಟಿ ನೀಡಿ, ಕೊವ್ಯಾಕ್ಸಿನ್‌ ಲಸಿಕೆಯ ಪ್ರಗತಿ ವೀಕ್ಷಿಸ ಲಿದ್ದಾರೆ. ಈ ಲಸಿಕೆ ಪ್ರಯೋಗ 3ನೇ ಹಂತದಲ್ಲಿದೆ.

ಬಳಿಕ ಪ್ರಧಾನಿ ಮರಳಿ ನವದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

Leave a Reply

Your email address will not be published. Required fields are marked *