Tuesday, 13th May 2025

23 ಯೋಜನೆಗಳಿಗೆ ಚಾಲನೆ ನೀಡಿ, ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ

ಲಖ್ವಾರ್ ವಿವಿಧೋದ್ದೇಶ ಯೋಜನೆಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ

ಹಲ್ದ್ವಾನಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉತ್ತರಾಖಂಡದಲ್ಲಿ 17,500 ಕೋಟಿ ರೂ.ಗೂ ಹೆಚ್ಚು ಮೌಲ್ಯದ 23 ಯೋಜನೆಗಳಿಗೆ ಗುರು ವಾರ ಚಾಲನೆ ನೀಡಿದ್ದು, ಶಂಕುಸ್ಥಾಪನೆ ನೆರವೇರಿಸಿದರು.

23 ಯೋಜನೆಗಳಲ್ಲಿ 14,100 ಕೋಟಿ ರೂ.ಗೂ ಹೆಚ್ಚು ಮೌಲ್ಯದ 17 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ.

ಪ್ರಧಾನ ಮಂತ್ರಿಯವರ ಕಚೇರಿ ಪ್ರಕಾರ, ಯೋಜನೆಗಳು ನೀರಾವರಿ, ರಸ್ತೆ, ವಸತಿ, ಆರೋಗ್ಯ ಮೂಲಸೌಕರ್ಯ, ಕೈಗಾರಿಕೆ, ನೈರ್ಮಲ್ಯ, ಕುಡಿಯುವ ನೀರು ಪೂರೈಕೆ ಸೇರಿದಂತೆ ರಾಜ್ಯದಾದ್ಯಂತ ವಿವಿಧ ವಲಯಗಳು/ಪ್ರದೇಶಗಳನ್ನ ಒಳಗೊಂಡಿವೆ.

ಈ ಕಾರ್ಯಕ್ರಮವು ಅನೇಕ ರಸ್ತೆ ಅಗಲೀಕರಣ ಯೋಜನೆಗಳು, ಪಿಥೋರಗಢದಲ್ಲಿ ಜಲವಿದ್ಯುತ್ ಯೋಜನೆ ಮತ್ತು ನೈನಿತಾಲ್ʼನಲ್ಲಿ ಒಳಚರಂಡಿ ಜಾಲವನ್ನ ಸುಧಾರಿಸುವ ಯೋಜನೆಗಳು ಸೇರಿದಂತೆ ಆರು ಯೋಜನೆಗಳ ಉದ್ಘಾಟನೆಗೆ ಸಾಕ್ಷಿಯಾಗಲಿದೆ. ಉದ್ಘಾಟನೆಗೊಳ್ಳುವ ಯೋಜನೆಗಳ ಸಂಚಿತ ವೆಚ್ಚ 3,4000 ಕೋಟಿ ರೂ.ಗಳಿಗೂ ಹೆಚ್ಚು.

ಇದೇ ವೇಳೆ ಸುಮಾರು 5,750 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಲಖ್ವಾರ್ ವಿವಿಧೋದ್ದೇಶ ಯೋಜನೆಗೆ ಪ್ರಧಾನ ಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ.