Thursday, 15th May 2025

ಓಮಿಕ್ರಾನ್ ರೂಪಾಂತರಿ ಆತಂಕ: ಕೆಲವೇ ನಿಮಿಷಗಳಲ್ಲಿ ಪ್ರಧಾನಿ ಸಭೆ

Narendra Modi

ನವದೆಹಲಿ: ಓಮಿಕ್ರಾನ್ ರೂಪಾಂತರಿ ಕರೋನಾ ವೈರಸ್‍ನ ಪ್ರಸರಣದ ಆತಂಕ ಹೆಚ್ಚುತ್ತಿರುವುದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ ಪರಾಮರ್ಶನಾ ಸಭೆ ನಡೆಸಲಿದ್ದಾರೆ.

ಈ ವೇಲೆ ದೇಶದಾದ್ಯಂತದ ಈ ಪಿಡುಗಿನ ಸ್ಥಿತಿಗತಿಯ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಳೆದ ಮಂಗಳವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದ ಕೇಂದ್ರ ಸರ್ಕಾರವು ಓಮಿಕ್ರಾನ್ ರೂಪಾಂತರಿಯು ಡೆಲ್ಟಾ ರೂಪಾಂತರಿಗಿಂತ ಮೂರು ಪಟ್ಟು ಸಾಂಕ್ರಾಮಿಕ ಎಂದು ಎಚ್ಚರಿಸಿತ್ತು. ವೈರಸ್ ನಿಗ್ರಹ ಕ್ರಮವನ್ನು ಜಿಲಾ ಮತ್ತು ಸ್ಥಳೀಯ ಮಟ್ಟದಲ್ಲಿ ಕೈಗೊಳ್ಳುವಂತೆ ಸೂಚಿಸಿತ್ತು.

ಭಾರತದಲ್ಲೂ ಕೋವಿಡ್ -19ರ ವಿರುದ್ಧ ಪೂರ್ಣ ಲಸಿಕೆ ಪಡೆದಿರುವುವರಿಗೆ ಬೂಸ್ಟರ್ ಡೋಸ್‍ಗಳನ್ನು ನೀಡಲು ಸರ್ಕಾರ ಅವಕಾಶ ನೀಡಬೇಕು ಎಂದು ಬೇಡಿಕೆಗಳು ಕೇಳಿಬರುತ್ತಿವೆ.