Monday, 12th May 2025

ಜಲಪಾಯ್‌ಗುಡಿ ಘಟನೆ: ಪ್ರಧಾನಿ ಸಂತಾಪ, 2 ಲಕ್ಷ ರೂಪಾಯಿ ಪರಿಹಾರ ಘೋಷಣೆ

ಜಲಪಾಯ್‌ಗುಡಿ: ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಯಲ್ಲಿ 18 ಮಂದಿ ಗಾಯಗೊಂಡಿದ್ದಾರೆ. ದಟ್ಟ ಮಂಜಿನಿಂದಾಗಿ ಗೋಚರತೆ ಕಡಿಮೆಯಾದ ಕಾರಣ ಅಪಘಾತ ಸಂಭವಿಸಿದೆ.

ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರ, ಹಾಗೆಯೇ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಸಹಾಯಧನ ಘೋಷಣೆ ಮಾಡಲಾಗಿದೆ.

ಪಶ್ಚಿಮ ಬಂಗಾಳದ ಜಲಪಾಯ್‌ಗುಡಿ ಜಿಲ್ಲೆಯ ಧೂಪ್‌ಗುರಿ ನಗರದಲ್ಲಿ ಅವಘಡ ಸಂಭವಿಸಿದೆ. ವಾಹನವೊಂದು ನಿಯಂತ್ರಣ ಕಳೆದುಕೊಂಡು ಟ್ರಕ್‌ಗೆ ಮುಖಾಮುಖಿ ಢಿಕ್ಕಿ ಹೊಡೆದು ವಿಭಜಕದ ಬಲ ಬದಿಗೆ ಸರಿದಿತ್ತು. ಎದುರಿನಿಂದ ಬಂದ ಎರಡು ವಾಹನ ಗಳು ಬಂಡೆಕಲ್ಲು ಹೊತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಸಂದರ್ಭ ಟ್ರಕ್ ವಾಹನದ ಮೇಲೆ ಮಗುಚಿದೆ. ಎಲ್ಲ ನಾಲ್ಕು ವಾಹನಗಳು ನಜ್ಜುಗುಜ್ಜಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

 

Leave a Reply

Your email address will not be published. Required fields are marked *