Saturday, 10th May 2025

Physical Abuse: ವಿದ್ಯಾರ್ಥಿನಿಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ ನಾಲ್ವರು ಶಿಕ್ಷಕರು!

Physical Abuse

ರಾಯ್‌ಪುರ್‌: ಗುರುಬಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ ಎಂದು ಗುರುವನ್ನು ಅತ್ಯುನ್ನತ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ. ಆದರೆ ವಿದ್ಯೆ ಕಲಿಸುವ ಗುರುವೇ ವಿದ್ಯಾರ್ಥಿಯ ಜೀವನವನ್ನೇ ಹಾಳು ಮಾಡಿದರೆ ಆ ಮಗುವಿನ ಮುಂದಿನ ಭವಿಷ್ಯದ ಗತಿಯೇನು? ಕಲಿಸುವ ಗುರುವೇ ವಿದ್ಯಾರ್ಥಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣವೊಂದು ಛತ್ತೀಸ್‌ಗಢದಲ್ಲಿ ಬೆಳಕಿಗೆ ಬಂದಿದೆ.ಛತ್ತಿಸ್‌ಗಢದ ಶಾಲೆಯೊಂದರಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು, ಮುಖ್ಯೋಪಾಧ್ಯಾಯರು ಮತ್ತು ಡೆಪ್ಯುಟಿ ರೇಂಜರ್ ಸೇರಿ 11ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ(Physical Abuse) ಎಸಗಿದ್ದಾರೆ.

ಈ ಕೃತ್ಯ ನಡೆದಿದ್ದು ಹೇಗೆ?
ಈ ಪ್ರಕರಣವು ಛತ್ತೀಸ್‌ಗಢದ ಎಂಸಿಬಿ ಜಿಲ್ಲೆಯ ಜನಕ್ಪುರ ಪೊಲೀಸ್ ಠಾಣೆ ಪ್ರದೇಶದಿಂದ ವರದಿಯಾಗಿದೆ. ಅಪ್ರಾಪ್ತ ಬಾಲಕಿ ಫೋಟೋಕಾಪಿ ಪಡೆಯಲು ಹತ್ತಿರದ ಅಂಗಡಿಗೆ ಬಂದಿದ್ದಳಂತೆ. ಅಲ್ಲಿ ಆಕೆಗೆ 48 ವರ್ಷದ ಆರೋಪಿ ಶಾಲಾ ಮುಖ್ಯೋಪಾಧ್ಯಾಯ ರವೇಂದ್ರ ಕುಶ್ವಾಹ ಸಿಕ್ಕಿ ಬಾಲಕಿಯನ್ನು ಪುಸಲಾಯಿಸಿ ಕಾರಿನಲ್ಲಿ 50 ವರ್ಷದ ಉಪನ್ಯಾಸಕ ಕುಶಾಲ್ ಸಿಂಗ್ ಪರಿಹಾರ್ ಅವರ ಮನೆಗೆ ಕರೆದೊಯ್ದನಂತೆ. ಅಲ್ಲಿಗೆ ಹೋದ ಬಳಿಕ ದೇವಗಢ ಹೈಯರ್ ಸೆಕೆಂಡರಿ ಶಾಲೆಯ 55 ವರ್ಷದ ಉಸ್ತುವಾರಿ ಪ್ರಾಂಶುಪಾಲ ಅಶೋಕ್ ಕುಶ್ವಾಹಗೆ ಕರೆ ಮಾಡಿದ್ದಾನೆ. ಇದಾದ ಸ್ವಲ್ಪ ಸಮಯದ ನಂತರ, ಡೆಪ್ಯೂಟಿ ರೇಂಜರ್ ಕೂಡ ಅಲ್ಲಿಗೆ ಬಂದಿದ್ದಾನೆ. ನಾಲ್ವರು ದುಷ್ಕರ್ಮಿಗಳು ಒಟ್ಟಾಗಿ ಮುಗ್ಧ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಅಶ್ಲೀಲ ವೀಡಿಯೊದ ಬ್ಲ್ಯಾಕ್‌ಮೇಲ್‌
ಮಾಹಿತಿಯ ಪ್ರಕಾರ, ಆರೋಪಿಗಳು ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವಾಗ ವೀಡಿಯೊವನ್ನು ಸಹ ಮಾಡಿದ್ದರಂತೆ. ವೀಡಿಯೊವನ್ನು ವೈರಲ್ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿ ನಾಲ್ವರು ಮತ್ತೆ ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಾಲಕಿ ಅಂಗಡಿಯೊಂದರಲ್ಲಿ ಸಾಮಾನು ಖರೀದಿಸಲು ಬಂದಿದ್ದಾಗ ಕುಶಾಲ್ ಸಿಂಗ್ ಪರಿಹಾರ್ ದಾರಿಯಲ್ಲಿ ಅವಳನ್ನು ಭೇಟಿಯಾಗಿ ಬೆದರಿಕೆ ಹಾಕಿ, ತನ್ನ ಬೈಕಿನಲ್ಲಿ ಕೂರಿಸಿ ಡೆಪ್ಯೂಟಿ ರೇಂಜರ್ ಬನ್ವಾರಿ ಸಿಂಗ್ ಅವರ ಮನೆಗೆ ಕರೆದೊಯ್ದು, ಅಲ್ಲಿ ಅವನು ಬಾಲಕಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿ ಮತ್ತೊಮ್ಮೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ.

ಇದನ್ನೂ ಓದಿ:ತಿಂಗಳಿಗೆ 1.2 ಲಕ್ಷ ಸಂಬಳ ಪಡೆಯುವ ವರನನ್ನು ಮಂಟಪದಲ್ಲೇ ರಿಜೆಕ್ಟ್‌ ಮಾಡಿದ ವಧು… ಕಾರಣ ಕೇಳಿದ್ರೆ ಶಾಕ್‌ ಆಗುತ್ತೆ!

ಎರಡು ಬಾರಿ ನಡೆದ ಸಾಮೂಹಿಕ ಅತ್ಯಾಚಾರದಿಂದ ಸಂತ್ರಸ್ತೆ ತುಂಬಾ ಭಯಭೀತಳಾಗಿದ್ದಳಂತೆ. ಈ ಕುರಿತು ಯಾರೊಂದಿಗೂ ಹೇಳದೆ ಮೌನವಾಗಿದ್ದಳಂತೆ. ಕೊನೆಗೆ ತಾಯಿ ಬಾಯಿಬಿಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ. ಸಂತ್ರಸ್ತೆ ತನ್ನ ತಾಯಿಯೊಂದಿಗೆ ಜನಕ್ಪುರ ಪೊಲೀಸ್ ಠಾಣೆಗೆ ತಲುಪಿ ನಾಲ್ವರ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾಳೆ. ಜಿಲ್ಲಾ ಎಸ್ಪಿ ಚಂದ್ರಮೋಹನ್ ಸಿಂಗ್ ಅವರು ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಠಾಣೆ ಅಧಿಕಾರಿಗೆ ಸೂಚನೆ ನೀಡಿದ್ದಾರೆ. ಜನಕ್ಪುರ ಪೊಲೀಸ್ ಠಾಣೆಯ ಉಸ್ತುವಾರಿ ದೀಪೇಶ್ ಸೈನಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮತ್ತೊಂದೆಡೆ, ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಇಲಾಖೆ ನಾಲ್ವರನ್ನು ಕೆಲಸದಿಂದ ಅಮಾನತುಗೊಳಿಸಿದೆ.