Monday, 12th May 2025

ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ಆಮ್‌ ಆದ್ಮಿ ಪಕ್ಷ ಬಹಿಷ್ಕಾರ

ವದೆಹಲಿ: ಇದೇ ಮೇ 28ರಂದು ಭಾನುವಾರ ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ.

ಈ ಕಾರ್ಯಕ್ರಮಕ್ಕೆ ಎರಡು ಸದನಗಳ ಸಭಾಪತಿಗಳಿಗೆ, ಸದಸ್ಯರಿಗೆ ಆಮಂತ್ರಣ ನೀಡಲಾಗಿದೆ. ಆದರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಮಂತ್ರಣ ನೀಡಿಲ್ಲ ಎಂದಿರುವ ಆಮ್‌ ಆದ್ಮಿ ಪಕ್ಷವು ಕಾರ್ಯಕ್ರಮ ಬಹಿಷ್ಕರಿಸುವುದಾಗಿ ತಿಳಿಸಿದೆ.

ಸಂಸತ್ ಭವನದ ಉದ್ಘಾಟನೆ, ದಿನಾಂಕ, ಕಾರ್ಯಕ್ರಮ ಆಹ್ವಾನಿಸಿದವರ ಪಟ್ಟಿ, ಕೇಂದ್ರ ಸರ್ಕಾರದ ನಡೆ ಕುರಿತು ಕಾಂಗ್ರೆಸ್ ಸೇರಿದಂತೆ ವಿವಿಧ ವಿಪಕ್ಷಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಟ್ವೀಟ್ ಮಾಡಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ ಭವನದ ಉದ್ಘಾಟನೆಗೆ ಆಹ್ವಾನಿಸದೇ ಅವರಿಗೆ ಕೇಂದ್ರ ಸರ್ಕಾರ ಅಪಮಾನ ಮಾಡಿದೆ ಎಂದು ಆರೋಪಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಉದ್ಘಾಟನೆ ಸಮಾರಂಭ ಬಹಿಷ್ಕರಿಸುವುದಾಗಿ ಘೋಷಿಸಿತ್ತು. ಕಾಂಗ್ರೆಸ್ ಸಹ ಈ ಬಗ್ಗೆ ಗುರುವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ನೂತನ ಸಂಸತ್ ಭವನದ ಉದ್ಘಾಟನೆಯನ್ನು ಇದೇ ಮೇ 28ರಂದು ಉದ್ಘಾಟಿಸಲು ಬಿಜೆಪಿ ಯೋಜಿಸಿದೆ. ಆದಿನ ಆರ್‌ಎಸ್‌ಎಸ್ ಮಠಾಧೀಶ ವಿಡಿ ಸಾವರ್ಕರ್ ಜನ್ಮದಿನ ಎಂದು ದೂರಲಾಗಿದ್ದು, ಉದ್ಘಾಟನೆಯನ್ನು ಆಗಸ್ಟ್ 15 ರಂದು ಆಯೋಜಿಸಲು ಒತ್ತಾಯಿಸಿದ್ದಾರೆ ಎನ್ನಲಾಗಿದೆ.