Saturday, 17th May 2025

Parliament Winter Session: ʻವೈವಿಧ್ಯತೆಯಲ್ಲಿ ವಿಷಬೀಜ ಬಿತ್ತುವ ಪ್ರಯತ್ನʼ-ಪ್ರಧಾನಿ ಮೋದಿ ಗುಡುಗು!

Parliament Winter Session:'India is mother of democracy'-PM Modi replies to Constitution debate in Lok Sabha

ನವದೆಹಲಿ: ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನದ (Parliament Winter Session) ಮೇಲಿನ ಚರ್ಚೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು. ಸಂವಿಧಾನ ರಚನೆಯನ್ನು ಉಲ್ಲೇಖಿಸಿದ ಅವರು, ಮಹಿಳೆಯರ ಕೊಡುಗೆಯನ್ನು ಶ್ಲಾಘಿಸಿದರು ಹಾಗೂ ದೇಶದ ವಿಭಜಕ ಶಕ್ತಿಗಳ ಬಗ್ಗೆ ಪ್ರಸ್ತಾಪಿಸಿದರು. ಭಾರತದ ಒಳಿತನ್ನು ಕಾಣದ ಜನರು ವೈವಿಧ್ಯತೆಯಲ್ಲಿ ವಿಷಬೀಜ ಬಿತ್ತಲು ಪ್ರಯತ್ನಿಸಿದರು ಎಂದು ಪಿಎ ಮೋದಿ ಕಿಡಿಕಾರಿದ್ದಾರೆ.

ದೇಶದ ವಿವಿಧತೆಯಲ್ಲಿನ ಏಕತೆಯ ಬಗ್ಗೆಯೂ ಪ್ರಧಾನಿ ಮಾತನಾಡಿದರು. ಸಂಸತ್ತು ಮತ್ತು ಸರ್ಕಾರದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಕುರಿತು ಪ್ರಧಾನಿ ಉಲ್ಲೇಖಿಸಿದರು. ದೇಶದ ವಿವಿಧ ಕಲ್ಯಾಣ ಯೋಜನೆಗಳಲ್ಲಿ ಮಹಿಳೆಯರ ಪ್ರಾಮುಖ್ಯತೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆಯನ್ನು ಪ್ರಧಾನಿ ಮೋದಿ ಗುಣಗಾನ ಮಾಡಿದ್ದಾರೆ.

75 ವರ್ಷಗಳ ಸಂವಿಧಾನ ರಚನೆಯ ಮೇಲಿನ ಚರ್ಚೆಯಲ್ಲಿ ಮಾತನಾಡಿದೆ ನರೇಂದ್ರ ಮೋದಿ, “ಸ್ವಾತಂತ್ರ್ಯದ ನಂತರ ವಿಕೃತ ಮನಸ್ಥಿತಿಯಿಂದಾಗಿ ದೇಶದ ಏಕತೆಯ ಸಾರದ ಮೇಲೆ ದಾಳಿ ನಡೆದಿದೆ. ಗುಲಾಮಗಿರಿ ಮನಸ್ಥಿತಿ ಹೊಂದಿರುವ ಜನರು ದೇಶದ ವೈವಿಧ್ಯತೆಯಲ್ಲಿ ವೈರುಧ್ಯಗಳನ್ನು ಕಂಡುಕೊಳ್ಳುತ್ತಲೇ ಇರುತ್ತಾರೆ. ವೈವಿಧ್ಯತೆಯ ಸಂಪತ್ತನ್ನು ಆಚರಿಸುವ ಬದಲು ವಿಷಬೀಜ ಬಿತ್ತುವ ಮೂಲಕ ದೇಶದ ಏಕತೆಗೆ ಧಕ್ಕೆ ತಂದಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

370ನೇ ವಿಧಿಯನ್ನು ಮಣ್ಣಿನಲ್ಲಿ ಹೂಳಲಾಯಿತು

“ವೈವಿಧ್ಯತೆಯ ಆಚರಣೆಯನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು. ಇದು ಬಾಬಾ ಸಾಹೇಬ್‌ ಡಾ. ಅಂಬೇಡ್ಕರ್‌ ಅವರಿಗೆ ಸಲ್ಲಿಸುವ ನಿಜವಾದ ಗೌರವ. ಸಂವಿಧಾನದ ಬೆಳಕಿನಲ್ಲಿ ಮಾತ್ರ ನನ್ನ ಅಭಿಪ್ರಾಯಗಳನ್ನು ಮಂಡಿಸಲು ಬಯಸುತ್ತೇನೆ. ಕಳೆದ 10 ವರ್ಷಗಳಲ್ಲಿ ನಾವು ಭಾರತದ ಏಕತೆಯನ್ನು ಬಲಪಡಿಸಲು ಶ್ರಮಿಸಿದ್ದೇವೆ. 370ನೇ ವಿಧಿ ದೇಶದ ಏಕತೆಗೆ ಅಡ್ಡಿಯಾಗಿತ್ತು ಹಾಗೂ ಗೋಡೆಯಾಗಿ ಮಾರ್ಪಟ್ಟಿತ್ತು. ದೇಶದ ಏಕತೆ ನಮ್ಮ ಆದ್ಯತೆಯಾಗಿದ್ದು, ಅದು ನಮ್ಮ ಸಂವಿಧಾನದ ಆಶಯವಾಗಿದೆ. ಅದಕ್ಕಾಗಿಯೇ ನಾವು 370ನೇ ವಿಧಿಯನ್ನು ಸಮಾಧಿ ಮಾಡಿದ್ದೇವೆ,” ಎಂದು ಪ್ರಧಾನಿ ಗುಡುಗಿದರು.

ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ

ಭಾರತದ ಪ್ರಜಾಸತ್ತಾತ್ಮಕ ಗತಕಾಲವು ಅತ್ಯಂತ ಶ್ರೀಮಂತವಾಗಿದೆ. ಜಗತ್ತಿಗೆ ಸ್ಪೂರ್ತಿದಾಯಕವಾಗಿದೆ. ನಮ್ಮದು ಕೇವಲ ಬೃಹತ್ ಪ್ರಜಾಪ್ರಭುತ್ವವಲ್ಲ ಬದಲಾಗಿ ಪ್ರಜಾಪ್ರಭುತ್ವದ ತಾಯಿ ಎಂದು ಹೇಳಿದ ಪ್ರಧಾನಿ ಮೋದಿ, ತಮ್ಮ ಭಾಷಣದಲ್ಲಿ ಡಾ ರಾಧಾಕೃಷ್ಣ, ಬಿಆರ್ ಅಂಬೇಡ್ಕರ್ ಸೇರಿದಂತೆ ಮೂವರು ಮಹಾಪುರುಷರನ್ನು ಕೊಂಡಾಡಿದರು. ದೇಶದ ಸಂವಿಧಾನವನ್ನು ಬಲಪಡಿಸುವಲ್ಲಿ ಮಹಿಳಾ ಶಕ್ತಿಯ ಪಾತ್ರವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಸಂವಿಧಾನ ಸಭೆಯಲ್ಲಿ 15 ಮಹಿಳೆಯರು ಸಂವಿಧಾನ ರಚನಾ ಸಭೆಯ ಚರ್ಚೆಗೆ ಜೀವ ತುಂಬಿದ್ದಾರೆ. ಸಂವಿಧಾನ ರಚನೆಯಲ್ಲಿ ಮಹತ್ತರವಾದ ಪ್ರಭಾವ ಬೀರಿದವು.

ಈ ಸುದ್ದಿಯನ್ನು ಓದಿ: Parliament Winter Session: ನ. 25ರಿಂದ ಡಿ. 20ರ ತನಕ ಸಂಸತ್ತಿನ ಚಳಿಗಾಲದ ಅಧಿವೇಶನ