Thursday, 15th May 2025

ನವೆಂಬರ್ 29 ರಿಂದ ಚಳಿಗಾಲದ ಸಂಸತ್ ಅಧಿವೇಶನ

ನವದೆಹಲಿ: ನವೆಂಬರ್ 29 ರಿಂದ ಡಿಸೆಂಬರ್ 23ರವರೆಗೆ ಚಳಿಗಾಲದ ಸಂಸತ್ ಅಧಿವೇಶನ ನಡೆಯುವ ಸಾಧ್ಯತೆಯಿದೆ.

ಬಜೆಟ್‌ʼನಲ್ಲಿ ಹಣಕಾಸು ಸಚಿವರು ಘೋಷಿಸಿದಂತೆ, ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣಕ್ಕೆ ಅವಕಾಶ ನೀಡುವ ಉದ್ದೇಶಿತ ಕಾನೂನು ಸೇರಿದಂತೆ ಎರಡು ಪ್ರಮುಖ ಹಣಕಾಸು ವಲಯದ ಮಸೂದೆಗಳನ್ನು ಮಂಡಿಸ ಬಹುದು.

ಸಾರ್ವತ್ರಿಕ ಪಿಂಚಣಿ ವ್ಯಾಪ್ತಿಯನ್ನ ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್ (NPS) ಅನ್ನು ಪಿಎಫ್ ಆರ್ ಡಿಎಯಿಂದ ಬೇರ್ಪಡಿ ಸಲು ಅನುವು ಮಾಡಿಕೊಡಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಕಾಯ್ದೆ, 2013 ಕ್ಕೆ ತಿದ್ದು ಪಡಿಗಳನ್ನ ಸರ್ಕಾರ ಮಂಡಿಸುವ ಸಾಧ್ಯತೆಯಿದೆ.

ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರಲ್ಲಿ ತಿದ್ದುಪಡಿ ಗಳನ್ನ ಮಂಡಿಸುವ ಸಾಧ್ಯತೆಯಿದೆ.

ಒಂದು ತಿಂಗಳ ಕಾಲ ನಡೆಯುವ ಅಧಿವೇಶನದಲ್ಲಿ, ಹಣಕಾಸು ಮಸೂದೆಯನ್ನ ಹೊರತುಪಡಿಸಿ ಹೆಚ್ಚುವರಿ ವೆಚ್ಚವನ್ನ ಕೈ ಗೊಳ್ಳಲು ಸರ್ಕಾರಕ್ಕೆ ಅವಕಾಶ ನೀಡುವ ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಎರಡನೇ ಬ್ಯಾಚ್ ಕೂಡ ಅನುಮೋದನೆಗಾಗಿ ಮಂಡಿಸಲಾಗುವುದು.

Leave a Reply

Your email address will not be published. Required fields are marked *