ಶ್ರೀನಗರ: ‘ವೈಯಕ್ತಿಕ ಮಾಹಿತಿ ಕಳವು ಪ್ರಕರಣಗಳು ಹೆಚ್ಚುತ್ತಿರುವ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಸುರಕ್ಷಿತ ವಲ್ಲ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಉಗ್ರ ಸಂಘಟನೆಗಳು ಹೊಸ ಮೆಸೆಜಿಂಗ್ ಆಯಪ್‌ಗಳ ಮೊರೆ ಹೋಗಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎನ್‌ಕೌಂಟರ್‌ನಲ್ಲಿ ಹತರಾದ ಹಾಗೂ ಭದ್ರತಾ ಸಿಬ್ಬಂದಿಯ ಎದುರು ಶರಣಾದ ಉಗ್ರರಿಂದ ಮಾಹಿತಿ ಕಲೆ ಹಾಕಿದಾಗ ಮೂರು ಹೊಸ ಆಯಪ್‌ಗಳನ್ನು ಬಳಸುತ್ತಿರುವುದು ಗೊತ್ತಾಗಿದೆ’ ಎಂದು ಹೇಳಿದ್ದಾರೆ.
ಅಮೆರಿಕ, ಯುರೋಪ್ ಹಾಗೂ ಟರ್ಕಿಯ ಕಂಪನಿಗಳು ಅಭಿವೃದ್ಧಿಪಡಿಸಿರುವ ಆಯಪ್‌ಗಳನ್ನು ಅವರು ಬಳಕೆ ಮಾಡು ತ್ತಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಉಗ್ರರನ್ನು ನೇಮಿಸುವುದೂ ಸೇರಿದಂತೆ ಇತರ ಕಾರ್ಯಗಳಿಗಾಗಿ ಟರ್ಕಿಯ ಆಯಪ್ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಆಯಪ್‌ಗಳು ಕಡಿಮೆ ವೇಗದ ಇಂಟರ್‌ನೆಟ್‌ನಲ್ಲೂ ಕಾರ್ಯನಿರ್ವಹಿಸುತ್ತವೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ (2019ರ ಆಗಸ್ಟ್) ನಂತರ ಕೇಂದ್ರ ಸರ್ಕಾರವು ಕಣಿವೆ ನಾಡಿನಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತ ಗೊಳಿಸಿತ್ತು. 2ಜಿ ಇಂಟರ್‌ನೆಟ್ ಸೇವೆ ಒದಗಿಸಲಾಗಿತ್ತು. ಆ ಸಮಯದಲ್ಲಿ ಉಗ್ರರು ಹೊಸ ಆಯಪ್‌ಗಳ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು.
ಉಗ್ರ ಸಂಘಟನೆಗಳು ಆರ್‌ಎಸ್‌ಎ-2048 ತಂತ್ರಾಂಶವನ್ನು ಒಳಗೊಂಡಿರುವ ಹೊಸ ಆಯಪ್‌ಗಳ ಮೊರೆ ಹೋಗಿವೆ. ಬಳಕೆ ದಾರರ ನಡುವೆ ವಿನಿಮಯವಾಗುತ್ತಿದ್ದ ದತ್ತಾಂಶಗಳು ಮೂರನೇ ವ್ಯಕ್ತಿಗೆ ಸೋರಿಕೆಯಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿ ಕೊಂಡ ನಂತರ ವರ್ಲ್ಡ್ ವೈಡ್ ವೆಬ್‌ನಲ್ಲಿ ಉಚಿತವಾಗಿ ಲಭ್ಯವಿದ್ದ ಹೊಸ ಆಯಪ್‌ಗಳನ್ನು ಬಳಸಲು ಶುರುಮಾಡಿವೆ’ ಎಂದು ಳಿಸಿದ್ದಾರೆ.