Sunday, 11th May 2025

ಸೈನಿಕರು ಗಡಿಯಲ್ಲಿ ಸಾಯುತ್ತಿದ್ದರೆ, ಭಾರತವು ಪಾಕಿಸ್ತಾನದ ವಿರುದ್ಧ ಟ್ವೆಂಟಿ-20 ಆಡುತ್ತಿದೆ: ಓವೈಸಿ ಕಿಡಿ

ಹೈದರಾಬಾದ್: ‘ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ಸೈನಿಕರು ಮೃತಪಟ್ಟಿದ್ದಾರೆ. ಆದರೆ ಅ.24ರಂದು ಭಾರತವು ಪಾಕಿಸ್ತಾನದ ವಿರುದ್ಧ ಟ್ವೆಂಟಿ-20 ಆಡುತ್ತಿದೆ’ ಎಂದು ಅಸಾದುದ್ದೀನ್ ಓವೈಸಿ ಕಿಡಿಕಾರಿದರು. ಪಾಕಿಸ್ತಾನವು ಕಾಶ್ಮೀರದಲ್ಲಿ ಭಾರತದ ಜನರ ಜೀವಗಳೊಂದಿಗೆ ಪ್ರತಿ ದಿನವೂ 20-20 ಆಡುತ್ತಿದೆ’ ಎಂದು ದೂರಿ ದ್ದಾರೆ.

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಅ. 24ರಂದು ಟ್ವೆಂಟಿ20 ವಿಶ್ವಕಪ್‌ನ ಪಂದ್ಯ ನಡೆಯಲಿದೆ. ಯುಎಇಯಲ್ಲಿ ನಡೆಯುತ್ತಿರುವ ಈ ವಿಶ್ವಕಪ್ ಟೂರ್ನಿಯಲ್ಲಿನ ಭಾರತ-ಪಾಕ್ ಮುಖಾಮುಖಿ ತೀವ್ರ ಕುತೂಹಲ ಕೆರಳಿಸಿದೆ

ಇದು ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ವೈಫಲ್ಯ ಎಂದು ಟೀಕಾಪ್ರಹಾರ ನಡೆಸಿದರು. ಬಿಹಾರದ ಬಡ ಕೆಲಸಗಾರ ರನ್ನು ಸಾಯಿಸಲಾಗುತ್ತಿದೆ. ಗುರಿ ಯಾಗಿಸಿ ಹತ್ಯೆಗಳನ್ನು ಮಾಡಲಾಗುತ್ತಿದೆ. ಗುಪ್ತಚರ ಇಲಾಖೆ ಮತ್ತು ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ? ಇದು ಕೇಂದ್ರ ಸರ್ಕಾರದ ವೈಫಲ್ಯ’ ಎಂದು ಟೀಕಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ಅಲ್ಪಸಂಖ್ಯಾತ ನಾಗರಿಕರನ್ನು ಗುರಿಯನ್ನಾಗಿಸಿ ನಿರಂತರ ದಾಳಿಗಳು ನಡೆಯುತ್ತಿವೆ. ಸೇನಾ ಪಡೆಗಳು ಸತತ ಎನ್‌ಕೌಂಟರ್‌ಗಳಲ್ಲಿ ತೊಡಗಿವೆ. ಅವುಗಳಲ್ಲಿ ಎರಡೂ ಕಡೆ ಅಪಾರ ಸಾವು ನೋವು ಸಂಭವಿಸಿವೆ.

ಪ್ರಧಾನಿ ಮೋದಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಏರಿಕೆ ಹಾಗೂ ಲಡಾಖ್‌ನ ನಮ್ಮ ಪ್ರದೇಶದ ಒಳಗೆ ಚೀನಾ ಕುಳಿತುಕೊಂಡಿರುವ ಬಗ್ಗೆ ಮಾತನಾಡುವುದಿಲ್ಲ. ಚೀನಾ ಬಗ್ಗೆ ಮಾತನಾಡಲು ನಮ್ಮ ಪ್ರಧಾನಿ ಹೆದರುತ್ತಾರೆ’ ಎಂದು ಓವೈಸಿ ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *