Tuesday, 13th May 2025

ಓಮಿಕ್ರಾನ್ ಕೇಸ್‌: ಗುಜರಾತ್‌ನಲ್ಲಿ ಇಬ್ಬರು ಹೊಸ ಸೋಂಕಿತರು ಪತ್ತೆ

Gujrath Omicron Case

ನವದೆಹಲಿ: ಓಮಿಕ್ರಾನ್ ರೂಪಾಂತರದ ಕೇಸ್‌ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು, ಗುಜರಾತ್‌ನಲ್ಲಿ ಇಬ್ಬರು ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

ಮಹಾರಾಷ್ಟ್ರ, ದೆಹಲಿ, ಗುಜರಾತ್, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಇಲ್ಲಿ ತನಕ ಈ ಕೇಸ್‌ಗಳು ಪತ್ತೆಯಾಗಿದ್ದಾವೆ. ಡಿ.4 ರಂದು, ಜಿಂಬಾಬ್ವೆಯಿಂದ ಗುಜರಾತ್‌ನ ಜಾಮ್‌ನಗರಕ್ಕೆ ಪ್ರಯಾಣಿಸಿದ ವ್ಯಕ್ತಿಯೊಬ್ಬರಲ್ಲಿ, ಓಮಿಕ್ರಾನ್ ರೂಪಾಂತರ ಕಂಡು ಅವರ ಸಂಪರ್ಕದಲ್ಲಿದಲ್ಲಿದ್ದ ಓರ್ವರಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿವೆ.

ದಕ್ಷಿಣ ಆಫ್ರಿಕಾ ಹಿಂದಿರುಗಿದವರು ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿದ್ದಾರೆ. ಅವರೊಂದಿಗೆ ಸಂಪರ್ಕಕ್ಕೆ ಬಂದ ಕನಿಷ್ಠ 10 ಜನರನ್ನು ಕ್ವಾರಂಟೈನ್ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದೆ.