Sunday, 11th May 2025

ಗಡಿ ಪರಿಸ್ಥಿತಿ ಆತಂಕಕಾರಿ, ಯುದ್ಧವಿಲ್ಲ, ಶಾಂತಿಯ ಸ್ಥಿತಿಯೂ ಇಲ್ಲ: ಭದೌರಿಯಾ

ಲಡಾಖ್‌: ಸದ್ಯ ಎಲ್‌ಎಸಿಯಲ್ಲಿ ಯುದ್ಧವಿಲ್ಲ, ಶಾಂತಿಯ ಸ್ಥಿತಿಯು ಇಲ್ಲ ಎಂದು ಭಾರತ ಹಾಗೂ ಚೀನಾದ ಲಡಾಖ್‌ ಗಡಿ ಪರಿಸ್ಥಿತಿ ಕುರಿತು ಭಾರತೀಯ ವಾಯುಸೇನೆ ಮುಖ್ಯಸ್ಥ ಆರ್‌ಕೆಎಸ್‌ ಭದೌರಿಯಾ ಹೇಳಿದ್ದಾರೆ.

ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಲಡಾಖ್‌ ಗಡಿ ಬಗ್ಗೆ ಮಾಹಿತಿ ನೀಡಿದ್ದು, ಸದ್ಯದ ಗಡಿ ಪರಿಸ್ಥಿತಿ ಆತಂಕಕಾರಿಯಾಗಿದೆ. ಯುದ್ಧವಿಲ್ಲ, ಶಾಂತಿಯ ಸ್ಥಿತಿಯು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಭಾರತದ ವಾಯುಸೇನೆಗೆ ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ, ಐಎಎಫ್‌ಗೆ ಸಾಕಷ್ಟು ಪ್ರಾಯೋಗಿಕ ಮತ್ತು ಕಾರ್ಯ ತಂತ್ರದ ಸಾಮರ್ಥ್ಯ ವರ್ಧನೆಯನ್ನು ಒದಗಿಸಿದಂತಾಗಿದೆ ಎಂದು ತಿಳಿಸಿದ್ದಾರೆ. ಇನ್ನ ಗಡಿಯಲ್ಲಿ ಚೀನಾ ಭಾರತಕ್ಕೆ ತೊಂದರೆ ನೀಡುತ್ತಿದ್ದು, ಇದಕ್ಕೆ ತಕ್ಕ ಉತ್ತರ ನೀಡಿರುವ ಭಾರತ ಈಗಾಗಲೇ ಹಲವು ಪ್ರಮುಖ ಆಯಕಟ್ಟಿನ ಸ್ಥಳಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

Leave a Reply

Your email address will not be published. Required fields are marked *