Wednesday, 14th May 2025

ಹಜ್ ಯಾತ್ರೆಗೆ ಕಾಲ್ನಡಿಗೆ: ಭಾರತೀಯ ಮುಸಲ್ಮಾನನಿಗೆ ಪಾಕಿಸ್ತಾನ ವೀಸಾ ನಿರಾಕರಣೆ

ಲುಧಿಯಾನಾ: ಕೇರಳದಿಂದ ಸೌದಿ ಅರೇಬಿಯಾದ ಮೆಕ್ಕಾಗೆ ಹಜ್ ಯಾತ್ರೆಗಾಗಿ ಕಾಲ್ನಡಿಗೆಯಲ್ಲಿ ತೆರಳಿದ್ದ ಶಿಹಾಬ್ ಚಿತ್ತೂರ್ ಇವರಿಗೆ ಪಾಕಿಸ್ತಾನ ಸರಕಾರವು ಅವರ ದೇಶದಿಂದ ಹಾದು ಹೋಗಲು ನಿರಾಕರಿಸಿದೆ.

ಈ ಮಾಹಿತಿಯನ್ನು ಪಂಜಾಬ್‌ನ ಶಾಹಿ ಇಮಾಮ್ ಮೌಲಾನಾ ಮುಹಮ್ಮದ್ ಉಸ್ಮಾನ್ ರಹಮಾನಿ ಲುಧಿಯಾನ್ವಿ ಅವರು ‘ಮಜಲಿಸ್ ಅಹರಾರ್ ಇಸ್ಲಾಂ’ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನೀಡಿದ್ದಾರೆ. ಸದ್ಯ ಶಿಹಾಬ್ ಚಿತ್ತೂರು ಪಂಜಾಬ್ ತನಕ ತಲುಪಿದ್ದಾರೆ.

ಮೌಲಾನಾ ಮಹಮ್ಮದ ಉಸ್ಮಾನ ಇವರು, ಪಾಕಿಸ್ತಾನದ ಅಧಿಕಾರಿಗಳ ವರ್ತನೆ ಅಚ್ಚರಿ ತಂದಿದೆ ಎಂದು ಹೇಳಿದರು. ಭಾರತದ ಮುಸಲ್ಮಾನರು ಪಾಕಿಸ್ತಾನ ಸರಕಾರದಿಂದ ಎಂದಿಗೂ ಏನನ್ನೂ ನಿರೀಕ್ಷಿಸಿಲ್ಲ. ೭೫ ವರ್ಷಗಳಲ್ಲಿ ಮೊದಲ ಬಾರಿಗೆ, ಭಾರತೀಯ ಮುಸಲ್ಮಾನನು ಕಾಲ್ನಡಿಗೆಯಲ್ಲಿ ಮೆಕ್ಕಾಗೆ ಹೋಗುತ್ತಿರುವಾಗ, ಪಾಕಿಸ್ತಾನವು ತನ್ನ ಭೂಮಿಯ ಮೂಲಕ ಹಾದುಹೋಗಲು ನಿರಾಕರಿಸಿತು.