Saturday, 10th May 2025

ರೈಲ್ವೆ ಖಾಸಗೀಕರಣ ಇಲ್ಲ: ಸಚಿವ ಪಿಯೂಷ್ ಗೋಯಲ್

ನವದೆಹಲಿ : ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಪ್ರಶ್ನೆ ಇಲ್ಲ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಮಂಗಳವಾರ ಲೋಕಸಭೆಯಲ್ಲಿ ಹೇಳಿದ್ದಾರೆ.

ಎರಡು ವರ್ಷಗಳಲ್ಲಿ ರೈಲು ಅಪಘಾತದಿಂದ ಯಾವುದೇ ಪ್ರಯಾಣಿಕ ಮೃತಪಟ್ಟಿಲ್ಲ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಿದೆ ಎಂದು ಹೇಳಿದರು. ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ದೇಶವು ಉನ್ನತ ಪ್ರಗತಿ ಸಾಧಿಸುತ್ತದೆ, ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಾಧ್ಯ ಎಂದು ಹೇಳಿದರು.

‘ಭಾರತೀಯ ರೈಲ್ವೆಯನ್ನು ಎಂದಿಗೂ ಖಾಸಗೀಕರಣ ಮಾಡುವುದಿಲ್ಲ. ಇದು ಪ್ರತಿಯೊಬ್ಬ ಭಾರತೀಯನ ಆಸ್ತಿಯಾಗಿದ್ದು, ಅದು ಭಾರತ ಸರ್ಕಾರದ ಜೊತೆಯಲ್ಲೇ ಇರಲಿದೆ ಎಂದರು.

ಪ್ರಯಾಣಿಕರ ಸುರಕ್ಷತೆಗೆ ಗಮನ ಹರಿಸುತ್ತಿದ್ದೇವೆ. 2019ರ ಮಾರ್ಚ್ ನಲ್ಲಿ ರೈಲು ಅಪಘಾತದಿಂದ ಕೊನೆಯ ಸಾವು ಸಂಭವಿಸಿದೆ’ ಎಂದು ಮಾಹಿತಿ ನೀಡಿದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *