Thursday, 15th May 2025

ನವಾಬ್ ಮಲಿಕ್ ಗೆ ಮಧ್ಯಂತರ ಜಾಮೀನು ನಿರಾಕರಣೆ

ಮುಂಬೈ: ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ನವಾಬ್ ಮಲಿಕ್ ಗೆ ಮಧ್ಯಂತರ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.

ಭೂಗತ ಪಾತಕಿ ದಾವೋದ್ ಇಬ್ರಾಹಿಂ ಸಹಚರರ ಜೊತೆಗೆ ನಂಟು ಆರೋಪದಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇದೇ ವರ್ಷದ ಫೆಬ್ರವರಿ 23 ರಂದು ಇಡಿ ಮಲಿಕ್ ಅವರನ್ನು ಬಂಧಿಸಿತ್ತು. ತನಗೆ ಮಧ್ಯಂತರ ಜಾಮೀನು ನೀಡಿ, ಕೂಡಲೇ ಬಿಡುಗಡೆ ಮಾಡಬೇಕೆಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಆಗಿರುವ ನವಾಜ್ ಮಲಿಕ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಆದಾಗ್ಯೂ, ಮಲಿಕ್ ಗೆ ಇಂತಹ ಯಾವುದೇ ಮಧ್ಯಂತರ ಜಾಮೀನು ಆದೇಶ ನೀಡುವು ದನ್ನು ನ್ಯಾಯಮೂರ್ತಿಗಳಾದ ಪಿ.ಬಿ.ವರಾಳೆ ಮತ್ತು ಎಸ್.ಎಂ.ಮೋದಕ ಅವರನ್ನೊಳ ಗೊಂಡ ನ್ಯಾಯಪೀಠ ನಿರಾಕರಿಸಿದೆ.