Sunday, 11th May 2025

ವಿಶ್ವಾಸಮತ ಗೆದ್ದ ಮಹಾಮೈತ್ರಿಕೂಟ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟ ಸರ್ಕಾರ ಬುಧವಾರ ರಾಜ್ಯ ವಿಧಾನಸಭೆ ಯಲ್ಲಿ ವಿಶ್ವಾಸಮತ ಗೆದ್ದಿದೆ.

ಕುಮಾರ್ ನೇತೃತ್ವದ ಸರ್ಕಾರದ ಬಹುಮತ ಸಾಬೀತುಪಡಿಸಲು ಬಿಹಾರ ವಿಧಾನಸಭೆ ಯಲ್ಲಿ ವಿಶ್ವಾಸಮತ ಯಾಚನೆ ನಡೆಯಿತು.

ವಿಶೇಷವೆಂದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ‘ಮಹಾಘಟಬಂಧನ್’ ಮೈತ್ರಿ ಸರ್ಕಾರದ ಬಹುಮತ  ಸಾಬೀತು ಪಡಿಸಲು ವಿಶ್ವಾಸಮತ ಯಾಚನೆಗೂ ಮುನ್ನ ಭಾರತೀಯ ಜನತಾ ಪಕ್ಷದ ವಿಜಯ್ ಕುಮಾರ್ ಸಿನ್ಹಾ ಅವರು ಬಿಹಾರ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಜೆಡಿಯುನ ನರೇಂದ್ರ ನಾರಾಯಣ್ ಯಾದವ್ ಅವರ ಹೆಸರನ್ನು ಸಿನ್ಹಾ ಶಿಫಾರಸು ಮಾಡಿ ದ್ದರು.