Thursday, 15th May 2025

ಅಕ್ರಮ ವಾಸ: 9 ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಥಾಣೆ: ಸೂಕ್ತ ದಾಖಲೆಗಳಿಲ್ಲದೆ ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಆರೋಪದ ಮೇಲೆ 9 ಬಾಂಗ್ಲಾದೇಶಿ ಪ್ರಜೆಗಳನ್ನು ಮಹಾ ರಾಷ್ಟ್ರದ ಭಿವಂಡಿಯಲ್ಲಿ ಬಂಧಿಸಲಾಗಿದೆ.

ಸಾರಾವಳಿ ಕೈಗಾರಿಕಾ ಎಸ್ಟೇಟ್‌ನ ಜವಳಿ ಘಟಕದಲ್ಲಿ ಉದ್ಯೋಗಿಯಾಗಿದ್ದ ಆರೋಪಿ ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೊಂಗಾವ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಹೇಳಿದ್ದಾರೆ. ಪೊಲೀಸರು ಗುರುವಾರ ತಡರಾತ್ರಿ ಖಚಿತ ಮಾಹಿತಿ ಮೇರೆಗೆ ಸಾರಾವಳಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ದಾಳಿ ನಡೆಸಿ ಆರೋಪಿ ಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸಲೀಂ ಅಮೀನ್ ಶೇಖ್(30), ರಸಲ್ ಅಬುಲ್ ಹಸನ್ ಶೇಖ್ (27), ಮೊಹಮ್ಮದ್ ಶೇನ್ ಮೊಹಮ್ಮದ್ ಅಕ್ಬರಲೈ ಶೇಖ್(24), ಮೊಹಮ್ಮದ್ ಮಸೂಮ್ ಶೀದುಲ್ಲಾ ಇಸ್ಲಾಂ(21), ತರುಣ್ಮಣಿರಾಮ್ ತ್ರಿಪುರ (21), ಸುಮನ್ ಮಣಿರಾಮ್ ತ್ರಿಬುಪ್ರಾ (25), ಇಸ್ಮಾಯಿಲ್ ಅಬು ತಾಹಿರ್ ಖಾನ್ (19), ಅಜಮ್ ಯೂಸುಫ್ ಖಾನ್ (19) ಮತ್ತು ಮೊಹಮ್ಮದ್ ಅಮೀರ್ ಅಬು ಸೂಫಿಯಾ ಖಾನ್ (26) ಎಂದು ಗುರುತಿಸ ಲಾಗಿದೆ.

ಎರಡು ದಿನಗಳ ಹಿಂದೆ ಭಾಯಂದರ್‌ನ ಗೋವಿಂದ್ ನಗರ ಪ್ರದೇಶದಲ್ಲಿ ಒಂಬತ್ತು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *