Monday, 12th May 2025

ಜಮಾತ್‌-ಎ-ಇಸ್ಲಾಮಿ ಸಂಘಟನೆಯ ಸದಸ್ಯರಿಗೆ ಎನ್‌ಐಎ ಬಿಸಿ

ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಜಮಾತ್‌-ಎ-ಇಸ್ಲಾಮಿ ಸಂಘಟನೆಯ ಸದಸ್ಯರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳ ಭಾನುವಾರ ದಾಳಿ ನಡೆಸಿದೆ.

ರಾಮ್‌ಬನ್, ಕಿಶ್ತವಾರ್‌ ಮತ್ತು ರಜೌರಿ ಸೇರಿದಂತೆ ಹಲವೆಡೆ ಜೆಇಐ ಸದಸ್ಯರಿಗೆ ಸಂಬಂಧಿಸಿದ ಮನೆಗಳು, ಕಚೇರಿಗಳು ಸೇರಿ 45ಕ್ಕೂ ಹೆಚ್ಚು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳವು ಶೋಧ ನಡೆಸಿದೆ’ ಎಂದು ಮಾಹಿತಿ ನೀಡಿದರು.

‘ಪೊಲೀಸರು ಮತ್ತು ಸಿಆರ್‌ಪಿಎಫ್‌ ನೆರವಿನಿಂದ ಎನ್‌ಐಎ ದಾಳಿ ನಡೆಸಿದೆ. ಈ ಸಂಘಟನೆಯ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದ ತನಿಖೆಯ ಭಾಗವಾಗಿ ದಾಳಿ ನಡೆ ದಿದೆ. ಇತರ ಸ್ಥಳಗಳಲ್ಲಿ ಈಗಲೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಕೇಂದ್ರ ಸರ್ಕಾರವು ‌ಫೆಬ್ರುವರಿ 2019ರಲ್ಲಿ ಭಯೋತ್ಪಾದನೆ ತಡೆ ಕಾಯ್ದೆಯಡಿ ಜಮಾತ್‌-ಎ-ಇಸ್ಲಾಮಿ ಸಂಘಟನೆಯ ಮೇಲೆ ಐದು ವರ್ಷಗಳ ನಿಷೇಧ ಹೇರಿದೆ.

Leave a Reply

Your email address will not be published. Required fields are marked *