Wednesday, 14th May 2025

ಔಷಧ ವ್ಯಾಪಾರಿ ಹತ್ಯೆ: ಆರೋಪಿಗಳು ಎನ್‌ಐಎ ವಶಕ್ಕೆ

ಮುಂಬೈ: ಅಮರಾವತಿಯ ಔಷಧ ವ್ಯಾಪಾರಿ ಉಮೇಶ್ ಕೊಲ್ಹೆ ಅವರ ಹತ್ಯೆಗೆ ಸಂಬಂಧಿಸಿ, ಎಲ್ಲಾ ಏಳು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ ತನ್ನ ವಶಕ್ಕೆ ತೆಗೆದುಕೊಂಡಿದೆ.

ಆರೋಪಿಗಳನ್ನು ಸೋಮವಾರ ಅಮರಾವತಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನಂತರ ಎಲ್ಲಾ ಆರೋಪಿಗಳನ್ನು ಎನ್‌ಐಎ ತನ್ನ ವಶಕ್ಕೆ ತೆಗೆದುಕೊಂಡಿದೆ. ಆರೋಪಿ ಗಳನ್ನು ಜು.8 ಅಥವಾ ಅದಕ್ಕೂ ಮೊದಲು ಎನ್‌ಐಎಯ ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಮುದಸ್ಸರ್ ಅಹ್ಮದ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24) ಶೋಯೆಬ್ ಖಾನ್ (22), ಅತೀಬ್ ರಶೀದ್ (22) ಮತ್ತು ಯೂಸುಫ್ ಖಾನ್ (32) ಮತ್ತು ಪ್ರಕರಣದ ಮಾಸ್ಟರ್‌ ಮೈಂಡ್‌ ಶೇಖ್ ಇರ್ಫಾನ್ ಶೇಖ್ ರಹೀಮ್ ಬಂಧಿತ ಆರೋಪಿಗಳು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತ ಶಮೀಮ್ ಅಹ್ಮದ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಜೂನ್ 21 ರಂದು ರಾತ್ರಿ 10 ರಿಂದ 10:30 ರ ನಡುವೆ ಉಮೇಶ್ ಮೇಲೆ ಮೂವರ ತಂಡವು ಚಾಕುವಿನಿಂದ ದಾಳಿ ನಡೆದಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲೇ ಅವರು ಮೃತಪಟ್ಟಿದ್ದರು.