Wednesday, 14th May 2025

ದೆಹಲಿ-ಎನ್‌ಸಿಆರ್‌ನಲ್ಲಿ ಭಾರಿ ಮಳೆ: ಕರ್ನಾಟಕದಲ್ಲಿ ಸೆ.15ರವರೆಗೂ ಯೆಲ್ಲೋ ಅಲರ್ಟ್

ನವದೆಹಲಿ: ದೆಹಲಿಯಲ್ಲಿ ಶನಿವಾರ ಒಂದೇ ಸಮನೆ ಮಳೆ ಸುರಿಯುತ್ತಿದೆ, ರಸ್ತೆಗಳು ಜಲಾವೃತವಾಗಿದೆ. ಮೋತಿ ಬಾಗ್, ಆರ್‌.ಕೆ.ಪುರಂ ಸೇರಿದಂತೆ, ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದೆ, ಮುಂದಿನ ಎರಡು ಗಂಟೆಗಳಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ 24 ಗಂಟೆಗಳಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಕ್ಷಿಣ ಮತ್ತು ಆಗ್ನೇಯ ರಾಜಸ್ಥಾನ, ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಚತ್ತೀಸ್‌ಗಢ ಮತ್ತು ಮಧ್ಯ ಮಹಾರಾಷ್ಟ್ರಗಳ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.

ಕರಾವಳಿ ಕರ್ನಾಟಕದ ಭಾಗಗಳು ಮತ್ತು ತೆಲಂಗಾಣ, ಕೇರಳ, ಉತ್ತರ ಪ್ರದೇಶ, ಜಮ್ಮು- ಕಾಶ್ಮೀರ, ಲಡಾಖ್, ಹರಿಯಾಣ, ದೆಹಲಿ, ಪಂಜಾಬ್, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ವಿದರ್ಭ, ಕೊಂಕಣ ಮತ್ತು ಗೋವಾಮತ್ತು ಪ್ರತ್ಯೇಕ ಭಾಗಗಳಲ್ಲಿ ಸಹ ಮಳೆಯಾಗುವ ಸಾಧ್ಯತೆಯಿದೆ ಇದೆ ಎಂದು ಇಲಾಖೆ ತಿಳಿಸಿದೆ. ಗುಜರಾತ್, ಒಡಿಶಾ, ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಹಿಮಾಚಲ ಹಾಗೂ ಉತ್ತರಾಖಂಡದಲ್ಲಿ ಭಾರೀ ಮಳೆ ಯಾಗುವ ಸೂಚನೆ ನೀಡಲಾಗಿದೆ.

ಮಧ್ಯ ಪ್ರದೇಶದ ಪಶ್ಚಿಮ ಭಾಗದಲ್ಲಿ ಚಂಡಮಾರುತ ಪ್ರಭಾವದಿಂದಾಗಿ ಗುಜರಾತ್, ರಾಜಸ್ಥಾನ ಹಾಗೂ ಮಧ್ಯ ಪ್ರದೇಶದಲ್ಲಿ ಸೆ.9ರಿಂದ 12ರವರೆಗೂ ಮಳೆ ಮುಂದುವರೆಯಲಿದೆ. ಹರಿಯಾಣ, ನೈಋತ್ಯ ಉತ್ತರ ಪ್ರದೇಶದಲ್ಲಿ ಸೆ.11-12 ರಂದು ಮಳೆ ಚುರುಕು ಪಡೆಯಲಿರುವುದಾಗಿ ತಿಳಿಸಿದೆ. ಕೊಂಕಣ ಹಾಗೂ ಗೋವಾಗೆ ಅತ್ಯಧಿಕ ಮಳೆಯಾಗುವ ಸೂಚನೆಯಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ತೆಲಂಗಾಣದಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದ ಸುಮಾರು ಎಂಟು ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಹೀಗಾಗಿ, ಒಡಿಶಾದ 11 ಜಿಲ್ಲೆಗಳಿಗೆ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂಬೈ ನಲ್ಲಿ ಭಾರೀ ಮಳೆ ಮುಂಬೈನಲ್ಲಿ ಭಾರೀ ಮಳೆ ಸೆಪ್ಟೆಂಬರ್ 12ರ ನಂತರವೂ ದೇಶದ ಹಲವು ಕಡೆಗಳಲ್ಲಿ ಮಳೆ ಮತ್ತಷ್ಟು ಬಿರುಸು ಪಡೆಯಲಿದೆ ಎಂದು ತಿಳಿಸಿದೆ.

ಸೆ.13ರಂದು ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುವುದಾಗಿ ತಿಳಿಸಿದೆ. ಮಹಾರಾಷ್ಟ್ರದ ಪುಣೆ ನಗರದಲ್ಲಿ ಭಾರೀ ಮಳೆ ಯಾಗುತ್ತಿದೆ. ಹೀಗಾಗಿ ಥಾಣೆ, ಪಾಲ್ಗರ್ ಸೇರಿ ಮುಂಬೈನಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಸೆ.15ರವರೆಗೂ ಭಾರಿ ಮಳೆಯಾಗ ಲಿದ್ದು, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಅಧಿಕ ಮಳೆಯಾಗಲಿದೆ. ಹಾಗೆಯೇ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲೂ ಹೆಚ್ಚು ಮಳೆಯಾಗಲಿದ್ದು, ಅಲ್ಲಿಯೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇದೆ 15ರವರೆಗೂ ಮಳೆ ಮುಂದುವರೆಯಲಿದೆ ಎಂದು ಭಾರತಿಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Leave a Reply

Your email address will not be published. Required fields are marked *