Monday, 12th May 2025

Naxal Encounter : 30 ನಕ್ಸಲರನ್ನುಎನ್‌ಕೌಂಟರ್‌ ಮಾಡಿದ ಭದ್ರತಾ ಪಡೆ

Naxal Encounter

ನವದೆಹಲಿ: ಛತ್ತೀಸ್‌ಗಢದ ನಾರಾಯಣಪುರ- ದಾಂತೇವಾಡ ಗಡಿ ಅರಣ್ಯ ಪ್ರದೇಶದಲ್ಲಿಸಂಚು ರೂಪಿಸುತ್ತಿದ್ದ 30 ಮಾವೋವಾದಿ ನಕ್ಸಲರನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ (Naxal Encounter) ಮೂಲಕ ಹತ್ಯೆ ಮಾಡಿದೆ. ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ನಕ್ಸಲ್‌ ನಿರ್ಮೂಲನಾ ಕಾರ್ಯಾಚರಣೆ ಪ್ರಾರಂಭಿಸಿತ್ತು. ಶುಕ್ರವಾರ ಮಧ್ಯಾಹ್ನ 12.30 ಕ್ಕೆ ಪತ್ತೆಯಾದ ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಎಕೆ ಸರಣಿ ರೈಫಲ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳು ಸೇರಿದಂತೆ ಹಲವಾರು ಅಸಾಲ್ಟ್ ರೈಫಲ್‌ಗಳನ್ನು ನಕಲ್ಸರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೊಡ್ಡ ಪ್ರಮಾಣದಲ್ಲಿ ಮಾವೋವಾದಿಗಳು ಕಾರ್ಯಾಚರಣೆ ಮಾಡುತ್ತಿರುವ ವರದಿಗಳು ಬಂದ ಬಳಿಕ ಭದ್ರತಾ ಪಡೆಗಳು ಓರ್ಚಾ ಮತ್ತು ಬರ್ಸೂರ್ ಪೊಲೀಸ್ ಠಾಣೆಗಳ ವ್ಯಾಪ್ತಿಯ ಗೋವೆಲ್, ನೆಂಡೂರ್ ಮತ್ತು ತುಲ್ತುಲಿ ಗ್ರಾಮಗಳಲ್ಲ ಕಾರ್ಯಾಚರಣೆ ನಡೆಸಿತ್ತು. ಹಳ್ಳಿಗಳ ಮೂಲಕ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.

ಇದನ್ನೂ ಓದಿ: S Jaishankar: ಪಾಕಿಸ್ತಾನದೊಂದಿಗೆ ಮಾತುಕತೆ ಮುಗಿದ ಅಧ್ಯಾಯ; ಸಚಿವ ಎಸ್‌. ಜೈಶಂಕರ್‌ ಸ್ಪಷ್ಟನೆ

ಶುಕ್ರವಾರ ಮಧ್ಯಾಹ್ನ ನೆಂದೂರು-ತುಲ್ತುಲಿ ಬಳಿಯ ಕಾಡುಗಳಲ್ಲಿ ನಕ್ಸಲರು ಎದುರಾಗಿದ್ದಾರೆ. ಈ ವೇಲೆ ಪರಸ್ಪರ ಗುಂಡಿನ ಚಮಮಕಿ ಪ್ರಾರಂಭವಾಯಿತು. ಎಚ್ಚರಿಕೆಯಿಂದ ಅವರನ್ನು ಬೆನ್ನಟ್ಟಿ ಹತ್ಯೆ ಮಾಡಲಾಗಿದೆ. ಭದ್ರತಾ ಪಡೆಗಳು ಕಾಡಿನ ಒಳಗೆ ಹೋಘಿ ಉಳಿದ ಕೆಲವು ಮಾವೋವಾದಿಗಳನ್ನು ಬೆನ್ನಟ್ಟುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಎನ್‌ಕೌಂಟರ್‌ ಛತ್ತೀಸ್‌ಗಡದ ಮಾವೋವಾದಿ ಬಂಡಾಯದ ವಿರುದ್ಧದ ಹೋರಾಟದಲ್ಲಿ ಭದ್ರತಾ ಪಡೆಗಳಿಗೆ ದೊರಕಿದ ದೊಡ್ಡ ಯಶಸ್ಸು.