Saturday, 17th May 2025

ವೀರ ವನಿತೆ ಒನಕೆ ಓಬವ್ವ ನಾರಿಶಕ್ತಿಯ ಧ್ಯೋತಕವಾಗಿದ್ದಾರೆ: ಪ್ರಧಾನಿ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕದ ವೀರ ವನಿತೆ ಒನಕೆ ಓಬವ್ವ ಅವರಿಗೆ ನಮನ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾದ ಆಚಾರ್ಯ ಕೃಪಲಾನಿ ಮತ್ತು ಮೌಲಾನಾ ಅಬ್ದುಲ್ ಕಲಾಮ್ ಆಜಾದ್ ಅವರ ಜನ್ಮ ದಿನಾಚರಣೆ ಅಂಗವಾಗಿ ಇಬ್ಬರಿಗೂ ಗೌರವ ಸಲ್ಲಿಸಿ, ಇದೇ ಸಂದರ್ಭದಲ್ಲಿ ಒನಕೆ ಓಬವ್ವ ಅವರನ್ನು ಸ್ಮರಿಸಿಕೊಂಡು ಟ್ವೀಟ್ ಮಾಡಿ ದ್ದಾರೆ.

ತನ್ನೂರಿನ ಜನರ ರಕ್ಷಣೆಗಾಗಿ ಚಿತ್ರದುರ್ಗದ ಕೋಟೆಗೆ ಮುತ್ತಿಗೆ ಹಾಕಿದ ಹೈದರ್ ಆಲಿ ಸೈನ್ಯದ ವಿರುದ್ಧ ವಿರೋಚಿತ ಹೋರಾಟ ನಡೆಸಿ ವೀರ ಮರಣವನ್ನಪ್ಪಿದ ವೀರ ವನಿತೆ ಒನಕೆ ಓಬವ್ವ ಅವರು ಭಾರತೀಯ ನಾರಿಶಕ್ತಿಯ ಧ್ಯೋತಕವಾಗಿದ್ದಾರೆ ಎಂದು ಮೋದಿ ಬಣ್ಣಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡ ಆಚಾರ್ಯ ಕೃಪಲಾನಿ ಅವರಿಗೂ ಮೋದಿ ಗೌರವ ನಮನ ಸಲ್ಲಿಸಿದ್ದಾರೆ. 

Leave a Reply

Your email address will not be published. Required fields are marked *