Sunday, 11th May 2025

ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಧಾನಿ ಮೋದಿ: ಟಿಎಂಸಿ ನಾಯಕ ಕೀರ್ತಿ ವ್ಯಂಗ್ಯ

ವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮೇಘಾಲಯಕ್ಕೆ ಭೇಟಿ ನೀಡಿದಾಗ ಖಾಸಿ ಸಮುದಾಯದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದನ್ನು ಮಾಜಿ ಕ್ರಿಕೆಟಿಗ ಮತ್ತು ಟಿಎಂಸಿ ನಾಯಕ ಕೀರ್ತಿ ಆಜಾದ್ ವ್ಯಂಗ್ಯ ಮಾಡಿದ್ದು, ಮಹಿಳೆಯರ ಉಡುಗೆ ಎಂದು ಬಣ್ಣಿಸಿದ್ದಾರೆ.

ಇದನ್ನ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಬಲವಾಗಿ ವಿರೋಧಿಸಿದರು.

ಇದು ಮೇಘಾಲಯದ ಜನರಿಗೆ ಮಾಡಿದ ಅವಮಾನ ಮತ್ತು ಬುಡಕಟ್ಟು ಜನರ ಉಡುಗೆ ತೊಡುಗೆ ಬಗ್ಗೆ ಗೇಲಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕೀರ್ತಿ ಆಜಾದ್ ಅವರು ಶಿಲ್ಲಾಂಗ್ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರ ಚಿತ್ರ ದೊಂದಿಗೆ ಟ್ವೀಟ್ ಮಾಡಿದ್ದು, ‘ಗಂಡು ಅಥವಾ ಹೆಣ್ಣು ಅಲ್ಲ, ಫ್ಯಾಷನ್’ನ ಪುರೋಹಿತ’ ಎಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಇದನ್ನ ಬಲವಾಗಿ ಆಕ್ಷೇಪಿಸಿ, ಆಜಾದ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ. ‘ಇದು ಬಹು ಹೂವಿನ ಕಸೂತಿ ಮಾಡಿದ ಮಹಿಳೆಯರ ಉಡುಪಾಗಿದೆ, ಇದನ್ನು ಖರೀದಿಸಬಹುದು, ನಿಮಗೆ ಇಷ್ಟವಾಯಿತೇ? ಇಲ್ಲಿಂದ ಖರೀದಿಸಿ’ ಎಂದು ಟ್ವೀಟ್ ಮಾಡಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪ್ರಧಾನಿ ಮೋದಿ ಅವರ ಉಡುಪನ್ನು ಅಣಕಿಸಿದ್ದಕ್ಕಾಗಿ ಆಜಾದ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಆಜಾದ್ ಅವರ ಅಭಿಪ್ರಾಯಗಳನ್ನು ಬೆಂಬಲಿಸು ತ್ತದೆಯೇ ಎಂದು ಟಿಎಂಸಿ ತಕ್ಷಣ ಸ್ಪಷ್ಟಪಡಿಸಬೇಕು ಎಂದಿದ್ದಾರೆ.