Sunday, 11th May 2025

ನಾಳೆಯಿಂದ ನಡ್ಡಾ ಪ.ಬಂಗಾಳಕ್ಕೆ ಎರಡು ದಿನ ಭೇಟಿ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನಾಳೆಯಿಂದ ಪಶ್ಚಿಮ ಬಂಗಾಳಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಲಿದ್ದಾರೆ.

ಒಂದೊಂದೆ ಹಗರಣದಲ್ಲಿ ಸಿಲುಕಿ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವ ಭ್ರಷ್ಟ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಹೋರಾಟವನ್ನು ತೀವ್ರಗೊಳಿಸಲು ನಡ್ಡಾ ಅವರು ನಮಗೆ ನಿರ್ದೇಶನ ನೀಡಲಿರುವುದು ಸಂತೋಷವಾಗಿದೆ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಪ್ರಮುಖ ರಾಜ್ಯ ಪದಾಧಿಕಾರಿಗಳಾದ ಬಾಬುಲ್ ಸುಪ್ರಿಯೋ, ಅರ್ಜುನ್ ಸಿಂಗ್ ಮತ್ತು ಜಾಯ್ ಪ್ರಕಾಶ್ ಮಜುಂದಾರ್ ಟಿಎಂಸಿಯನ್ನು ತ್ಯಜಿಸಲಿಸಲಿದ್ದಾರೆ ಎನ್ನಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವದ್ದಾಗಿದೆ.

ನಡ್ಡಾ ಅವರು ಶಾಸಕರು ಮತ್ತು ಸಂಸದರು ಮತ್ತು ಹೊಸ ರಾಜ್ಯ ಘಟಕದ ಮೊದಲ ಕಾರ್ಯಕಾರಿ ಸಮಿತಿಯ ಸಭೆಗಳ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸುಕಾಂತ ಹೇಳಿದರು.

ಜೆಪಿ ನಡ್ಡಾ ಈ ಹಿಂದೆ ಹಲವು ಬಾರಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು.