Sunday, 11th May 2025

ಸೇನಾ ಉಪಾಧ್ಯಕ್ಷರನ್ನಾಗಿ ಲೆಫ್ಟಿನೆಂಟ್ ಜನರಲ್ ಎಂವಿ ಸುಚೀಂದ್ರ ಕುಮಾರ್ ನೇಮಕ

ನವದೆಹಲಿ: ಭಾರತೀಯ ಸೇನೆಯು ಲೆಫ್ಟಿನೆಂಟ್ ಜನರಲ್ ಎಂವಿ ಸುಚೀಂದ್ರ ಕುಮಾರ್ ಅವರನ್ನು ಹೊಸ ಸೇನಾ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ಪ್ರಸ್ತುತ ಅಧಿಕಾರಿಯನ್ನು ನೈಋತ್ಯ ಸೇನಾ ಕಮಾಂಡ್‌ಗೆ ಸೇನಾ ಕಮಾಂಡರ್ ಆಗಿ ವರ್ಗಾಯಿಸಲಾಗಿದೆ.

ಈ ಮುಂಚೆ ಲೆಫ್ಟಿನೆಂಟ್ ಜನರಲ್ ಸುಚೇಂದ್ರ ಕುಮಾರ್ ಅವರು ಸೇನಾ ಸಿಬ್ಬಂದಿಯ (ತಂತ್ರ) ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ವೈಟ್ ನೈಟ್ ಕಾರ್ಪ್ಸ್ ಸೇರಿದಂತೆ ವಿವಿಧ ಪ್ರಮುಖ ಕಾರ್ಯಯೋಜನೆಯ ಭಾಗವಾಗಿದ್ದಾರೆ.

ಇದುವರೆಗೆ ಸೇನಾ ಉಪ ಮುಖ್ಯಸ್ಥ ಹುದ್ದೆಯಲ್ಲಿದ್ದ ಲೆಫ್ಟಿನೆಂಟ್ ಜನರಲ್ ಬಿಎಸ್ ರಾಜು ಅವರನ್ನು ಸೌತ್ ವೆಸ್ಟರ್ನ್ ಆರ್ಮಿ ಕಮಾಂಡ್‌ಗೆ ಸ್ಥಳಾಂತ ರಿಸಲಾಗಿದ್ದು, ಫೆಬ್ರವರಿ 28 ರಂದು ನಿವೃತ್ತಿ ಹೊಂದುತ್ತಿರುವ ಲೆಫ್ಟಿನೆಂಟ್ ಜನರಲ್ ಎಎಸ್ ಭಿಂಡರ್ ಅವರು ಉತ್ತರಾಧಿಕಾರಿಯಾಗಲಿದ್ದಾರೆ.