Monday, 12th May 2025

Murder case: ಪಕ್ಕದ ಮನೆಯ ಮಗುವನ್ನು ಸಾಯಿಸಿ ವಾಷಿಂಗ್‌ ಮಷಿನ್‌ನಲ್ಲಿಟ್ಟು, ತನಗೇನೂ ಗೊತ್ತಿಲ್ಲ ಎಂದು ನಟಿಸಿದಳು!

MURDER CASE WACHING MACHINE

ಚೆನ್ನೈ: ಇದ್ದಕ್ಕಿದಂತೆ ನಾಪತ್ತೆಯಾದ (missing case) ಮೂರು ವರ್ಷದ ಮಗು ಶವವಾಗಿ ಪಕ್ಕದ ಮನೆಯ ವಾಷಿಂಗ್ ಮಷಿನ್‌ನಲ್ಲಿ (Washing Machine) ಪತ್ತೆಯಾದ ದಾರುಣ ಘಟನೆ (Murder case) ನಡೆದಿದೆ. ಪಕ್ಕದ ಮನೆಯ ಮಹಿಳೆ ಈ ಕೃತ್ಯ (crime news) ಎಸಗಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ರಾಧಾಪುರಂ ನಿವಾಸಿಯಾಗಿರುವ ವಿಘ್ನೇಶ್ ಮತ್ತು ರಮ್ಯಾ ದಂಪತಿಯ ಪುತ್ರನಾದ ಸಂಜಯ್ ನೆರೆಮನೆಯ ಮಹಿಳೆಯ ಕೃತ್ಯದಿಂದ ಜೀವ ಕಳೆದುಕೊಂಡ ನತದೃಷ್ಟ ಮಗು. ಆರೋಪಿ ನೆರೆಮನೆಯ ತಂಕಮ್ಮಳನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಸುಮಾರು 9.30 ರ ಹೊತ್ತಿಗೆ ಸಂಜಯ್ ಅಂಗನವಾಡಿಗೆ ಹೊರಡಲು ತಯಾರಾಗಿ ಮನೆಯ ಹಿತ್ತಲಲ್ಲಿ ಆಟವಾಡುತ್ತಿದ್ದ. ಆ ವೇಳೆ ತಾಯಿ ಮನೆಯೊಳಗೆ ಕೆಲಸ ಮಾಡಿಕೊಂಡಿದ್ದು, ಬಳಿಕ ಮಗುವನ್ನು ಅಂಗನವಾಡಿಗೆ ಕಳುಹಿಸಲು ಮನೆಯ ಹೊರಗೆ ಬಂದಿದ್ದಾರೆ. ಆದರೆ ಆಟವಾಡುತ್ತಿದ್ದ ಸಂಜಯ್ ಎಲ್ಲೂ ಕಂಡಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಂಜಯ್ ಪತ್ತೆಯಾಗಲಿಲ್ಲ. ಗಾಬರಿಗೊಂಡ ಮಹಿಳೆ ಗಂಡನಿಗೆ ವಿಚಾರ ತಿಳಿಸಿದ್ದಾರೆ. ಗಂಡ ಕೂಡಲೇ ಮನೆಗೆ ಬಂದು ಎಲ್ಲ ಕಡೆ ಹುಡುಕಾಡಿದ್ದಾರೆ. ಎಲ್ಲೂ ಪತ್ತೆಯಾಗಿಲ್ಲ. ಬಳಿಕ ಪೋಷಕರು ಪಕ್ಕದ ಪೊಲೀಸ್ ಠಾಣೆಗೆ ಮಗು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಕುಟುಂಬಕ್ಕೆ ಯಾರ ಮೇಲಾದರೂ ಅನುಮಾನ ಇದೆಯಾ ಎಂದು ಕೇಳಿದ್ದಾರೆ. ಆಗ ಪೋಷಕರು ಪಕ್ಕದ ಮನೆಯ ಮಹಿಳೆಯ ಮೇಲೆ ಅನುಮಾನ ಇದೆ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಜಾಗದ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿತ್ತು. ಹೀಗಾಗಿ ಪೊಲೀಸರು ನೆರೆಮನೆಯಲ್ಲಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಮನೆಯಲ್ಲಿದ್ದ ಆರೋಪಿ ತಂಕಮ್ಮ ತನಗೇನೂ ಗೊತ್ತಿಲ್ಲ ಎಂದು ನಟಿಸಿದ್ದಾಳೆ. ಪೊಲೀಸರು ಮನೆಯ ಒಳಗೆ ಹುಡುಕಾಟ ನಡೆಸಿದಾಗ ಗಾಬರಿಗೊಂಡ ತಂಕಮ್ಮ ಮನೆಯಿಂದ ಹೊರಗೆ ಓಡಿ ಹೋಗಿದ್ದಾಳೆ. ಇದರಿಂದ ಅನುಮಾನಗೊಂಡ ಪೊಲೀಸರು ಮನೆಯನ್ನು ಇಂಚಿಂಚಾಗಿ ಪರಿಶೀಲಿಸಿದ್ದು, ಆ ವೇಳೆ ವಾಷಿಂಗ್ ಮೆಷಿನ್ ಒಳಗೆ ಬಟ್ಟೆಯಿಂದ ಸುತ್ತಿದ ರೀತಿಯಲ್ಲಿ ಸಂಜಯ್ ಮೃತದೇಹ ಪತ್ತೆಯಾಗಿದೆ.

ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಕೊಲೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ ಎರಡು ಕುಟುಂಬಗಳ ನಡುವೆ ಹಳೆಯ ದ್ವೇಷವಿತ್ತು. ಅಲ್ಲದೆ ತಂಕಮ್ಮಾಳ್ ಪುತ್ರ ಇತ್ತೀಚೆಗೆ ನಿಧನ ಹೊಂದಿದ್ದ. ಇದರಿಂದ ತಂಕಮ್ಮಾಳ್ ಮಾನಸಿಕ ಖಿನ್ನತೆಗೂ ಒಳಗಾಗಿದ್ದಳಂತೆ.

ಈ ಸುದ್ದಿ ಓದಿ: Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್‌ಶೀಟ್‌ ವಿವರ ಪ್ರಸಾರಕ್ಕೆ ತಡೆ ಹಾಕಿದ ಹೈಕೋರ್ಟ್‌

Leave a Reply

Your email address will not be published. Required fields are marked *