Sunday, 11th May 2025

Crime News : ಅಕ್ರಮ ಸಂಬಂಧ ಉಳಿಸಲು ಸುಫಾರಿ ಕೊಟ್ಟು ಹೆತ್ತಮ್ಮನನ್ನೇ ಕೊಂದ ಮಗಳು

Murder case

ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಯನ್ನೇ (Murder case) ಕೊಲೆಗಾರನನ್ನು (contract killer) ನೇಮಿಸಿ ಮಗಳೇ ಕೊಂದ ಘಟನೆ ಮಹಾರಾಷ್ಟ್ರದ (Maharastra) ಮಂಬಯಿಯಲ್ಲಿ (Mumbai) ನಡೆದಿದೆ. ಮಗಳು ಮೊಬೈಲ್ ಬಳಸದಂತೆ ಬೈದಿರುವುದೇ ತಾಯಿಯ ಜೀವಕ್ಕೆ ಕುತ್ತು ತಂದಿದೆ. ಪ್ರಕರಣಕ್ಕೆ ಸಂಬಂಧಿಸಿ ದತ್ತು ಮಗ ಮತ್ತು ಮಗಳನ್ನು ಬಂಧಿಸಲಾಗಿದೆ. ಮಾಹೇಲಿ ಪನ್ವೇಲ್‌ನಲ್ಲಿ ಈ ಘಟನೆ ನಡೆದಿದ್ದು, ಪ್ರಿಯಾ ನಾಯಕ್ ಮೃತಪಟ್ಟವರು. ತಾಯಿಯನ್ನೇ ಕೊಲೆ ಮಾಡಿದ ಮಗಳು ಪ್ರಣೀತಾ ಪಾಟೀಲ್ ಮತ್ತು ಮಗ ನಿಶಾಂತ್ ಪಾಂಡೆಯನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ಮದುವೆಯ ಅನಂತರ ಪ್ರಣೀತಾ ಪಾಟೀಲ್ ತನ್ನ ಪತಿಯೊಂದಿಗೆ ಜಗಳವಾಡಿ ಐದು ವರ್ಷದ ಮಗಳೊಂದಿಗೆ ತಾಯಿಯ ಮನೆಗೆ ಬಂದಿದ್ದಳು. ಎರಡು ವರ್ಷಗಳಿಂದ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಈ ವೇಳೆ ಆಕೆ ಯುವಕನೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ತಕ್ಷಣ ಪ್ರಣೀತಾ ಅವರ ತಾಯಿ ಪ್ರಿಯಾ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಪ್ರಣೀತಾ ಅದನ್ನು ಕ್ಯಾರೇ ಎನ್ನಲಿಲ್ಲ.

ಕೋಪಗೊಂಡ ತಾಯಿ ಪ್ರಿಯಾ ತನ್ನ ಮಗಳ ಮೊಬೈಲ್ ಫೋನ್ ಕಸಿದುಕೊಂಡು ಇಂದಿನಿಂದ ನೀನು ಆ ಯುವಕನೊಂದಿಗೆ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದ್ದರು. ಇದು ಪ್ರಣೀತಾಗೆ ಇಷ್ಟವಾಗಿರಲಿಲ್ಲ. ಹೀಗಾಗಿ ತಾಯಿಯನ್ನೇ ಕೊಲ್ಲಲು ಆಕೆ ಯೋಜನೆ ಹಾಕಿಕೊಂಡಳು.

ವಿವೇಕ್ ಪಾಟೀಲ್ ಎಂಬಾತನಿಗೆ ಹಣದ ಅವಶ್ಯಕತೆ ಇದ್ದುದರಿಂದ ಪ್ರಣೀತಾ ಆತನೊಂದಿಗೆ ಒಪ್ಪಂದ ಮಾಡಿಕೊಂಡಳು. ತನ್ನ ತಾಯಿಯನ್ನು ಕೊಂದರೆ 10 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದಳು . ವಿವೇಕ್ ಪ್ರಿಯಾ ಅವರ ದತ್ತು ಮಗ ನಿಶಾಂತ್ ಪಾಂಡೆ ಸಹಾಯದಿಂದ ಸೆಪ್ಟೆಂಬರ್ 13 ರಂದು ಪ್ರಿಯಾ ನಾಯ್ಕ್ ಅವರನ್ನು ಅವರ ಮನೆಯಲ್ಲೇ ಕೊಲೆ ಮಾಡಿದ್ದರು. ರಾತ್ರಿ ಪ್ರಿಯಾ ಅವರ ಪತಿ ಪ್ರಹ್ಲಾದ್ ನಾಯ್ಕ್ ಮನೆಗೆ ಬಂದಾಗ ಪ್ರಿಯಾ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದರು.

Car Accident: ಮಾಗಡಿ ಬಳಿ ಭೀಕರ ಕಾರು ಅಪಘಾತ; ಒಂದೇ ಕುಟುಂಬದ ಐವರ ದುರ್ಮರಣ

ಮರಣೋತ್ತರ ಪರೀಕ್ಷೆಯಲ್ಲಿ ಪ್ರಿಯಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಪ್ರಿಯಾ ಪಾಟೀಲ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *