Tuesday, 13th May 2025

ಮುಖ್ತಾರ್ ಅನ್ಸಾರಿ ಕುಟುಂಬದ 8 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಘಾಜಿಪುರ: ಲಖನೌದಲ್ಲಿ ಗ್ಯಾಂಗ್ಸ್ಟರ್ ಹಾಗೂ ರಾಜಕಾರಣಿಯಾಗಿರುವ ಮುಖ್ತಾರ್ ಅನ್ಸಾರಿ ಅವರ ಕುಟುಂಬದ ಸದಸ್ಯರು ಮತ್ತು ಆಪ್ತ ಸಹಾಯಕನ ಹೆಸರಿನಲ್ಲಿ ನೋಂದಾಯಿಸಲಾದ 8 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾ ಗಿದೆ.
ಲಖನೌನ ದಾಲಿಬಾಗ್ ಪ್ರದೇಶದಲ್ಲಿ ಅನ್ಸಾರಿ ಅವರ ತಾಯಿ ಮತ್ತು ಅವರ ಆಪ್ತ ಸಹಾ ಯಕ ಎಜಾಜುಲ್ ಅನ್ಸಾರಿ ಅವರ ಪತ್ನಿ ಹೆಸರಿನಲ್ಲಿದ್ದ ಭೂಮಿಯನ್ನು ಮೊಹಮ್ಮದಾ ಬಾದ್ ಸರ್ಕಲ್ ಆಫೀಸರ್ ಎಸ್ ಬಿ ಸಿಂಗ್ ನೇತೃತ್ವದ ತಂಡ ಜಪ್ತಿ ಮಾಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಓಂವೀರ್ ಸಿಂಗ್ ತಿಳಿಸಿದರು.
‘ನಿವೇಶನಗಳ ಒಟ್ಟು ಮೌಲ್ಯ ಸುಮಾರು 8 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮುಖ್ತಾರ್ ಅನ್ಸಾರಿ ತನ್ನ ಗ್ಯಾಂಗ್ನ ಅಪರಾಧ ಚಟುವಟಿಕೆಗಳಿಂದ ಗಳಿಸಿದ ಹಣವನ್ನು ಬಳಸಿ ಆಸ್ತಿಗಳನ್ನು ಖರೀದಿಸಿದ್ದಾರೆ’ ಎಂದು ಎಸ್ಪಿ ಹೇಳಿದರು.
ಆಸ್ತಿಯನ್ನು ಜಪ್ತಿ ಮಾಡಿದ ತಂಡವು ಈ ಕಾರ್ಯಾಚರಣೆಗೆ ಲಖನೌ ಪೊಲೀಸ್ ಕಮಿಷನ ರೇಟ್ನ ಸ್ಥಳೀಯ ತಂಡದ ಸಹಾಯ ವನ್ನು ಕೋರಿತ್ತು. ಘಾಜಿಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಆರ್ಯಕ ಅಖೌರಿ ಅವರು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಆದೇಶ ವನ್ನು ಹೊರಡಿಸಿದ್ದಾರೆ.

Read E-Paper click here